ಕರ್ನಾಟಕ

karnataka

ETV Bharat / state

ಚಿಲುಮೆ ಸಂಸ್ಥೆಯವರು ಪರಿಚಯಸ್ಥರೇ, ನಾನವರನ್ನು ಬಳಕೆ ಮಾಡಿಲ್ಲ: ಡಾ.‌ಅಶ್ವತ್ಥ ನಾರಾಯಣ - voters data theft

ಬಿಬಿಎಂಪಿ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳ ಮತದಾರರ ಮಾಹಿತಿ ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

Higher Education Minister Dr. Ashwattha Narayan
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ

By

Published : Nov 20, 2022, 7:15 AM IST

ಮಂಗಳೂರು:ಕಾಂಗ್ರೆಸ್‌ನವರ ಕೀಳುಮಟ್ಟ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಚಿಲುಮೆ ಸಂಸ್ಥೆಯ ಅವಶ್ಯಕತೆ ನನಗಿಲ್ಲ, ನಾನು ಅದನ್ನು ಬಳಕೆ ಮಾಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದರು. ಕಾಂಗ್ರೆಸ್‌ನವರಿಗೆ ಪಾರದರ್ಶಕತೆ, ನ್ಯಾಯಸಮ್ಮತ ವಿಚಾರ, ಕಾನೂನಿನ ಬಗ್ಗೆ ಮಾತನಾಡಲು ಯಾವುದೇ ಮೌಲ್ಯ, ಅರ್ಹತೆ ಇಲ್ಲ ಎಂದರು.

ಚಿಲುಮೆ ಸಂಸ್ಥೆಯ ಬಗ್ಗೆ ನನಗೇನು ಗೊತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಅವರು ನನ್ನ ಪರಿಚಯಸ್ಥರೇ, ನಾನು ಯಾರಿಗೂ ಸಂಸ್ಥೆಯ ಬಗ್ಗೆ ಸಲಹೆ ಮಾಡಿಲ್ಲ ಎಂದರು. ಬೇರೆಯವರು ಬೇರೆ ಬೇರೆ ಕೆಲಸಗಳಿಗೆ ಚಿಲುಮೆ‌ ಸಂಸ್ಥೆಯವರನ್ನು ಬಳಕೆ ಮಾಡಿರಬಹುದು. ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಮಾಹಿತಿ ಸಂಗ್ರಹ ಆರೋಪದ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.

ಬಾಡಿಗೆಗೆ ಜನ ಬೇಕಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ. ಅದು ಕಾರ್ಯಕರ್ತರಿಲ್ಲದ ಪಕ್ಷ. ಎಲೆಕ್ಟ್ರಾಲ್ ಮಾಲ್ ಪ್ರ್ಯಾಕ್ಟೀಸ್ ಕಾಂಗ್ರೆಸ್‌ಗೆ ಬೇಕು. ಅವರಿಗೆ ಅಸ್ತಿತ್ವ, ಸಿದ್ದಾಂತ ಇಲ್ಲ ಎಂದು ಗುಡುಗಿದರು.‌ ಈಗ ನಡೆಯುತ್ತಿರುವ ಆಧಾರ್ ಅಪ್‌ಡೇಟ್ ಪ್ರಕ್ರಿಯೆ, ಚುನಾವಣಾ ಸರ್ವೇ ಸೇರಿ ಅನೇಕ ಕೆಲಸವನ್ನು ಚಿಲುಮೆ ಸಂಸ್ಥೆ ಮಾಡುತ್ತದೆ. ಯಾವುದನ್ನೂ ಮುಚ್ಚಿಡುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಆ ರೀತಿಯ ಉದ್ದೇಶ ಇದ್ದಿದ್ದರೆ ತನಿಖೆಗೆ ಆದೇಶ ಯಾಕೆ ಮಾಡುತ್ತಿದ್ದೆವು ಎಂದರು.

ಇದನ್ನೂ ಓದಿ:ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ, ಕೂಡಲೇ ಅವರು ರಾಜೀನಾಮೆ ಕೊಡಲಿ: ಎನ್.ರವಿಕುಮಾರ್

ABOUT THE AUTHOR

...view details