ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಕೊರೊನಾ ಅಬ್ಬರ ಜೋರಾಗಿದೆ. ಸಾವಿರದ ಗಡಿಯಲ್ಲಿ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಕ್ರಮ ಕೈಗೊಂಡರೂ ಕೋವಿಡ್ ಸಂಖ್ಯೆ ಮಾತ್ರ ಇಳಿಕೆ ಕಾಣುತ್ತಿಲ್ಲ.
ಇದರ ನಡುವೆ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಜ್ವರ, ನೆಗಡಿ, ಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಪರಿಣಾಮ ನಗರ ಪ್ರದೇಶಗಳಲ್ಲಿ ಪ್ಯಾರಾಸಿಟಾಮೊಲ್, ಡೋಲೋ-650 ಯಂತಹ ಮೆಡಿಸಿನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಚಳಿಯ ವಾತಾವರಣವಿದ್ದು, ಈ ಬಾರಿ ಕರಾವಳಿ ತಾಲೂಕುಗಳಲ್ಲೂ ಸಹ ಹಿಂದೆಂದಿಗಿಂತ ಹೆಚ್ಚು ಚಳಿ ಬೀಳುತ್ತಿದೆ. ಇದರಿಂದಾಗಿ ಒಂದೆಡೆ ಕೊರೊನಾ ಭೀತಿಯ ನಡುವೆ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಬಹುತೇಕರಲ್ಲಿ ಕಂಡು ಬರುತ್ತಿದ್ದು, ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ.
ಬಹುತೇಕ ಎಲ್ಲರ ಮನೆಗಳಲ್ಲೂ ಇಂತಹ ಲಕ್ಷಣಗಳ ಜನರು ಕಂಡು ಬರುವಂತಾಗಿದ್ದು, ಇಂತಹವರು ಆಸ್ಪತ್ರೆಗಳಿಗೆ ತೆರಳುವ ಬದಲು ಮೆಡಿಕಲ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಕಳೆದೊಂದು ವಾರದಿಂದ ಡೋಲೋ 650, ಪ್ಯಾರಾಸಿಟಾಮೊಲ್ ಮಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ನಗರ ಪ್ರದೇಶದ ಮೆಡಿಕಲ್‌ವೊಂದರಲ್ಲೇ ದಿನಕ್ಕೆ 200 ರಿಂದ 250 ಗುಳಿಗೆ ಸ್ಟ್ರೀಪ್‌ಗಳು ಮಾರಾಟವಾಗುತ್ತಿವೆ.
ಓದಿ:'ಯುದ್ಧ ಮುಂದುವರೆದಿದೆ.. ಈಗ ಎಂಎಸ್ಪಿ ಸರದಿ' ಎಂದು ವಿವಾಹ ಆಮಂತ್ರಣ ಪತ್ರದಲ್ಲಿ ಮುದ್ರಿಸಿದ ಯುವಕ