ಕರ್ನಾಟಕ

karnataka

ETV Bharat / state

ಕಾರವಾರದಲ್ಲಿಯೂ ಕೊರೊನಾ ವಾರಿಯರ್ಸ್​ಗೆ ವಿಶಿಷ್ಟ ಗೌರವ ಸಲ್ಲಿಸಿದ ನೌಕಾದಳ!

ಕೇಂದ್ರ ಸರ್ಕಾರದ ಸೂಚನೆಯಂತೆ ಈಗಾಗಲೇ ಮುಂಬೈ, ಗುಜರಾತ್​ನಲ್ಲಿರುವ ನೌಕಾನೆಲೆಗಳಲ್ಲಿ ಹರ್ ಕಾಮ್ ದೇಶ್ ಕೇ ನಾಮ್ ಧ್ಯೇಯ ವಾಕ್ಯದೊಂದಿಗೆ ನೌಕೆಗಳನ್ನು ಲೈಟ್​ಗಳಿಂದ ಅಲಂಕರಿಸಿ, ಬ್ಯಾಂಡ್ ವಾದ್ಯದೊಂದಿಗೆ ವಿಶಿಷ್ಟ ಗೌರವ ಸಲ್ಲಿಸಿರುವ ಸೇನೆ, ಕಾರವಾರದಲ್ಲಿಯೂ ಕೊರೊನಾ ವಾರಿಯರ್ಸ್​ ಬೆಂಬಲಿಸಿ ಗೌರವಿಸಿದೆ.

Karwar Navy
ಕದಂಬ ನೌಕಾನೆಲೆ

By

Published : May 3, 2020, 9:22 PM IST

ಕಾರವಾರ:ಮಹಾಮಾರಿ ಕೊರಾನಾ ವಿರುದ್ಧ ಹೋರಾಡುತ್ತಿರುವವರಿಗೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ನೌಕಾಸೇನೆಯ ಯುದ್ಧ ನೌಕೆಗಳ ಮೇಲಿಂದ ಬಣ್ಣದ ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ವಿಶಿಷ್ಟ ಗೌರವ ಸಲ್ಲಿಸಿದೆ.

ಕಾರವಾರದಲ್ಲಿಯೂ ಕೊರೊನಾ ವಾರಿಯರ್ಸ್​ಗೆ ವಿಶಿಷ್ಟ ಗೌರವ ಸಲ್ಲಿಸಿದ ನೌಕಾಸೇನೆ

ದೇಶದಾದ್ಯಂತ ಕೊರೊನಾ ವಿರುದ್ಧ ವೈದ್ಯರು, ನರ್ಸ್, ಪೊಲೀಸ್, ಸ್ವಚ್ಛತಾ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಇಂತವರ ಕಾರ್ಯವನ್ನು ಅಭಿನಂದಿಸುವುದರ ಜೊತೆಗೆ ಬೆಂಬಲಿಸಿ ಪ್ರೋತ್ಸಾಹಿಸಿ ನಿಟ್ಟಿನಲ್ಲಿ ನೌಕಾಸೇನೆ ಇಂದು ಕಾರವಾರದ ಕದಂಬ ನೌಕಾನೆಲೆಯಲ್ಲಿ ಯುದ್ಧನೌಕೆಗಳಿಗೆ ಲೈಟ್ ಅಳವಡಿಸಿ ಸಿಡಿಮದ್ದುಗಳನ್ನು ಸಿಡಿಸಿ ಗೌರವ ಸಲ್ಲಿಸಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಈಗಾಗಲೇ ಮುಂಬೈ, ಗುಜರಾತ್​ನಲ್ಲಿರುವ ನೌಕಾನೆಲೆಗಳಲ್ಲಿ ಹರ್ ಕಾಮ್ ದೇಶ್ ಕೇ ನಾಮ್ ಧ್ಯೇಯ ವಾಕ್ಯದೊಂದಿಗೆ ನೌಕೆಗಳನ್ನು ಲೈಟ್​ನಿಂದ ಅಲಂಕರಿಸಿ, ಬ್ಯಾಂಡ್ ವಾದ್ಯದೊಂದಿಗೆ ವಿಶಿಷ್ಟ ಗೌರವ ಸಲ್ಲಿಸಿರುವ ಸೇನೆ, ಕಾರವಾರದಲ್ಲಿಯೂ ಕೊರೊನಾ ವಾರಿಯರ್ಸ್ ಬೆಂಬಲಿಸಿ ಗೌರವಿಸಿದೆ.

ಕದಂಬ ನೌಕಾನೆಲೆ

ಇನ್ನು ದೇಶದಲ್ಲಿಯೇ ಮೊದಲ ಬಾರಿಗೆ ಸಶಸ್ತ್ರ ಮೀಸಲು ಪಡೆಗಳ ಪೈಕಿ ಕಾರವಾರದಲ್ಲಿರುವ ಪತಂಜಲಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೊಳಗಾದವರಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯ ಭಟ್ಕಳ ಮೂಲದ ಒಟ್ಟು 11 ಜನರ ಪೈಕಿ 9 ಜನರಿಗೆ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರವಾರದ ವೈದ್ಯಕೀಯ ಕಾಲೇಜಿನ ವೈದ್ಯರು ಚಿಕಿತ್ಸೆ ನೀಡಿದ್ದರು. ಇದೀಗ ಎಲ್ಲರೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ನೌಕಾಪಡೆಯ ವಕ್ತಾರ ಅಜಯ್ ಕಪೂರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details