ಕಾರವಾರ:ಉತ್ತರಕನ್ನಡ ಜಿಲ್ಲೆಯ ಮೂವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಸೆ.5 ರಂದು ನಡೆಯಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಜೋಯಿಡಾ ತಾಲೂಕಿನ ಅಣಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಕ್ಷತಾ ಅನಿಲ ಬಾಸಗೋಡು, ಕಾರವಾರ ಶೈಕ್ಷಣಿಕ ಜಿಲ್ಲೆಯ ಹೊನ್ನಾವರ ತಾಲೂಕಿನ ಬಿರಂಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಹರಿಕಂತ್ರ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಚಿತ್ತಾರ ಮಂಕಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪ್ರಕಾಶ್ ನಾಯ್ಕ ಅವರನ್ನು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಪುರಸ್ಕೃತರ ಪಟ್ಟಿಯಲ್ಲಿ ಮಹಿಳಾ ಶಿಕ್ಷಕಿಯರಿಗೆ ಅಕ್ಷರ ಮಾತೆ 'ಸಾವಿತ್ರಿಬಾಯಿ ಫುಲೆ' ಹೆಸರಿನಲ್ಲಿ ಸೆಪ್ಟೆಂಬರ್ 5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.
2023-24ನೇ ಸಾಲಿನ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳ ಉತ್ತಮ ಶಿಕ್ಷಕರ ಪ್ರಶಸ್ತಿ ಶನಿವಾರ ಪ್ರಕಟವಾಗಿದೆ. ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದ ತಲಾ ಓರ್ವರನ್ನು ಪ್ರತಿ ತಾಲೂಕಿನಿಂದ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ:ಕಾರವಾರ ಶೈಕ್ಷಣಿಕ ಜಿಲ್ಲೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕಾರವಾರದ ನಿವಳಿ ಶಾಲೆಯ ಕೃಷ್ಣಾನಂದ ರಾಮಚಂದ್ರ ಗುನಗಾ, ಅಂಕೋಲಾದ ಮಾರುಗದ್ದೆ ಶಾಲೆಯ ಸಜೀವ ಆರ್.ನಾಯಕ, ಕುಮಟಾದ ಶೋಕನಮಕ್ಕಿ ಶಾಲೆಯ ನಿರ್ಮಲಾ ಆರ್.ನಾಯ್ಕ, ಹೊನ್ನಾವರದ ಪಡುಕುಳಿ ಶಾಲೆಯ ಸುರೇಖಾ ಲಕ್ಷ್ಮೀನಾರಾಯಣ ಹೆಗಡೆ ಹಾಗೂ ಭಟ್ಕಳದ ಮೇಲಿನ ಶೇರುಗಾರಕೇರಿ ಶಾಲೆಯ ಮಹಾದೇವ ಜಟ್ಟಾ ನಾಯ್ಕ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕಾರವಾರದ ಮೂಡ್ಲಮಕ್ಕಿಯ ಶಂಕರ ಮಾಣಿ ಹರಿಕಾಂತ, ಅಂಕೋಲಾ ಅವರ್ಸಾದ ಅರುಣ ಸಣ್ಣು ಶೇಡಗೇರಿ, ಕುಮಟಾ ಗಂಗೆಕೊಳ್ಳದ ಉದಯ ಕೇಶವ ನಾಯಕ, ಹೊನ್ನಾವರ ಸಾನಾಮೋಟ ಮಾವಿನಕುರ್ವಾದ ನಿತ್ಯಾನಂದ ಕೃಷ್ಣ ನಾಯಕ, ಭಟ್ಕಳ ವೆಂಕ್ಟಾಪುರದ ರೇವತಿ ಅಣ್ಣಪ್ಪ ಹಾವಳಿಮನೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರೌಢಶಾಲಾ ವಿಭಾಗದಿಂದ ಕಾರವಾರದ ಮೀನಾಕ್ಷಿ ಬೀರಣ್ಣ ನಾಯಕ, ಅಂಕೋಲಾ ಅಗಸೂರು ಕೆಪಿಎಸ್ ದೈಹಿಕ ಶಿಕ್ಷಕ ರಾಜೇಂದ್ರ ಪುಂಡಲೀಕ ಕೇಣಿ, ಕುಮಟಾ ಮಹತ್ಮಾ ಗಾಂಧಿ ಪ್ರೌಢಶಾಲೆಯ ಪಾಂಡುರಂಗ ಸುಬ್ರಾಯ ವಾಗ್ರೇಕರ್, ಹೊನ್ನಾವರ ಬಣಸಾಲೆ ಮಂಕಿಯ ರಾಹತ ಫಾತೀಮಾ ಎಚ್ ಹಾಗೂ ಭಟ್ಕಳ ಬೆಳಕೆಯ ಚಂದ್ರಶೇಖರ ಸುಬ್ಬ ಬೈಲೂರು ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿರಸಿ- ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ವಿವರ:ಶಿರಸಿಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಗಣಪತಿ ಹೆಗಡೆ ಶಿರಸಿ (ಮೊಗದ್ದೆ), ರೀಟಾ ಮಿಂಗಲ್ ಡಿಸೋಜಾ ಸಿದ್ದಾಪುರ (ಮೆಣಸಿ), ಶ್ರೀಧರ ಮಡಿವಾಳ ಯಲ್ಲಾಪುರ (ಗೋಳಿಗದ್ದೆ), ನಾಗರಾಜ ನಾಯ್ಕ ಮುಂಡಗೋಡ (ಭದ್ರಾಪುರ), ರವೀಂದ್ರ ಪಾಟಿಲ್ ಹಳಿಯಾಳ (ಆಲೋಳ್ಳಿ), ಸತ್ಯಪ್ಪ ಭೀಮಪ್ಪಾ ತೊಟಗಿ ಜೊಯಿಡಾ (ವಟಲಾ).
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ರೇಷ್ಮಾ ರೊಡ್ರಿಗಿಸ್ ಶಿರಸಿ (ಪಂಚಲಿಂಗ), ಎಂ.ಐ.ಹೆಗಡೆ ಸಿದ್ದಾಪುರ (ದೊಡ್ಮನೆ), ಮಾದೇವಿ ಭಟ್ ಯಲ್ಲಾಪುರ (ಚವತ್ತಿ), ಮಾಲತಿ ಪಾಳೆದವರ್ ಮುಂಡಗೋಡ (ನಂ.3 ಶಾಲೆ), ಶೋಭಾ ಕಡೋಲಕರ್ ಹಳಿಯಾಳ (ಹಳೆದಾಂಡೇಲಿ), ವೆಂಕಮ್ಮ ಗಾಂವಕರ್ ಜೊಯಿಡಾ (ನ್ಯೂಟೌನ್ ಶಿಪ್ ).
ಪ್ರೌಢಶಾಲಾ ವಿಭಾಗದಲ್ಲಿ ಜಯಲಕ್ಷ್ಮಿ ಶಿರಸಿ (ಮಾರಿಕಾಂಬಾ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ), ವಿಷ್ಣು ಆರ್.ನಾಯ್ಕ ಸಿದ್ದಾಪುರ (ಜಿಡ್ಡಿ), ವಿನೋದ ಭಟ್ಟ ಯಲ್ಲಾಪುರ (ವೈ.ಟಿ.ಎಸ್.ಎಸ್.ಶಾಲೆ), ವಿನೋದ ನಾಯಕ್ ಮುಂಡಗೋಡ (ಶಾಸಕರ ಸರಕಾರಿ ಮಾದರಿ ಹಿ.ಪ್ರಾ.ಶಾಲೆ), ಎಸ್.ಎಸ್.ಕದಂಬ ಹಳಿಯಾಳ (ಜನಗಾ), ಲಕ್ಷ್ಮೀಕಾಂತ ಎಂ.ಪಟಗಾರ ಜೊಯಿಡಾ (ಕೆ.ಎಚ್.ಇ.ಪಿ.ಪ್ರೌಢಶಾಲೆ ಗಣೇಶಗುಡಿ). ಸೆ.5 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಶಿರಸಿಯ ನಾರಾಯಣ ಭಾಗವತ್ಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ