ಶಿರಸಿ:ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಾರ್ಯಕರ್ತರು,ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಸ್ಪೀಕರ್ ಆದ್ಮೇಲೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ ಕಾಲಿಟ್ಟ ಕಾಗೇರಿ; ಅಭಿಮಾನಿಗಳಿಂದ ಸ್ವಾಗತ - sirasi latest news
ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಾರ್ಯಕರ್ತರು,ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಸ್ಪೀಕರ್ ಆದ ಬಳಿಕ ಮೊದಲ ಬಾರಿ ಸ್ವಕ್ಷೇತ್ರಕ್ಕೆ ತೆರಳಿದ ಕಾಗೇರಿ..ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾಗಿರುವ ಕಾಗೇರಿ, ಕೆಲ ದಿನಗಳ ಹಿಂದೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಸ್ಪೀಕರ್ ಆದ ನಂತರ ಮೊದಲ ಬಾರಿಗೆ ಶಿರಸಿಯಲ್ಲಿರುವ ಸಭಾಧ್ಯಕ್ಷರ ಕಾರ್ಯಾಲಯಕ್ಕೆ ಆಗಮಿಸಿದ್ದ ಅವರಿಗೆ ಹೂಮಾಲೆ ಹಾಕಿ, ಫಲ-ಪುಷ್ಪಗಳನ್ನು ನೀಡಿ ಅಭಿನಂದಿಸಿದರು.
ಸ್ಪೀಕರ್ ಆಗಮನದ ಹಿನ್ನಲೆ, ಶಿಷ್ಠಾಚಾರದಂತೆ ಎಲ್ಲಾ ಇಲಾಖೆಗಳ ಸಿಬ್ಬಂದಿಗಳು ಕಾರ್ಯಾಲಯಕ್ಕೆ ಆಗಮಿಸಿ, ಕಾಗೇರಿ ಅವರಿಗೆ ಶುಭಕೋರಿದರು.