ಕಾರವಾರ :ಟೋಕಿಯೊ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಪೂನಾದಲ್ಲಿರುವ ತಮ್ಮ ಗುರು ಹಾಗೂ ಕನ್ನಡಿಗ ಕಾಶಿನಾಥ ನಾಯ್ಕ್ ಅವರ ಮನೆಗೆ ಭೇಟಿ ನೀಡಿ ಕೆಲ ಸಮಯ ಕಳೆದಿದ್ದಾರೆ.
ಗುರುವಿನಿಂದ ಪದಕ ಹಾಕಿಸಿಕೊಂಡ ನೀರಜ್ ಚೋಪ್ರಾ ಪೂನಾದ ಕೋರೆಗಾಂವ್ನಲ್ಲಿರುವ ಶಿರಸಿ ಮೂಲದ ಕಾಶಿನಾಥ ಅವರ ಮನೆಗೆ ಆಗಮಿಸಿದ ನೀರಜ್ ಚೋಪ್ರಾ, ಅವರನ್ನು ಕಾಶಿನಾಥ ಪತ್ನಿ ಚೈತ್ರಾ ಆರತಿ ಬೆಳಗಿ ತಿಲಕ ಇಟ್ಟು ಸ್ವಾಗತಿಸಿದರು. ಮನೆಗೆ ಆಗಮಿಸುತ್ತಿದ್ದಂತೆ ಎದುರಿನಲ್ಲೇ ಕಂಡ ನಾಯಿಯನ್ನು ಹಿಡಿದು ನೀರಜ್ ಆಟವಾಡಿದ್ದಾರೆ.
ನಾಯಿಯ ಜೊತೆ ನೀರಜ್ ಚೋಪ್ರಾ ಆಟ ಬಳಿಕ ಗುರು ಕಾಶಿನಾಥ ನಾಯ್ಕ್ ಹಾಗೂ ಅವರ ಕುಟುಂಬದವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಕಳೆದ ಅವರು ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಜೊತೆಗೆ ಉಪಹಾರ ಕೂಡ ಸೇವನೆ ಮಾಡಿದ್ದಾರೆ. ಬಳಿಕ ಗುರುವಿನ ಮಾರ್ಗದರ್ಶನದಲ್ಲಿ ಗೆದ್ದ ಚಿನ್ನದ ಪದಕವನ್ನು ಗುರುವಿನಂದಲೇ ಮತ್ತೊಮ್ಮೆ ಕೊರಳಿಗೆ ಹಾಕಿಕೊಂಡು ಸಂಭ್ರಮಿಸಿದ್ದಾರೆ.
ಖ್ಯಾತಿಯ ಉತ್ತುಂಗಕ್ಕೇರಿದರೂ ಕನ್ನಡಿಗ ದ್ರೋಣಾಚಾರ್ಯನ ಮರೆಯದ ಬಂಗಾರದ 'ಬಾಹು' ನೀರಜ್.. ಈ ಮೂಲಕ ಕೆಲ ದಿನಗಳ ಹಿಂದೆ ಚಿನ್ನ ಗೆದ್ದ ನೀರಜ್ ಚೋಪ್ರಾ ಗುರು ಕಾಶಿನಾಥ ನಾಯ್ಕ್ ಅವರು ಅಲ್ಲ. ಅವರು ಯಾರೆಂಬುದೇ ಗೊತ್ತಿಲ್ಲ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರುವಾಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕರ್ನಾಟಕ ಸರ್ಕಾರ ಕೋಚ್ ಕಾಶಿನಾಥ ನಾಯ್ಕ್ ಅವರಿಗೆ ಘೋಷಣೆ ಮಾಡಿದ್ದ ರೂ. 10 ಲಕ್ಷ ಬಹುಮಾನ ನೀಡಲು ವಿರೋಧ ವ್ಯಕ್ತಪಡಿಸಿದ್ದರು.
ಕಾಶಿನಾಥ ನಾಯ್ಕ ಕುಟುಂಬದೊಂದಿಗೆ ನೀರಜ್ ಚೋಪ್ರಾ ಈ ಬಗ್ಗೆ ಕನ್ನಡಿಗರು ಸೇರಿ ದೇಶದಾದ್ಯಂತ ಅಥ್ಲೆಟಿಕ್ಸ್ ಅಧ್ಯಕ್ಷರಿಗೆ ಕಾಮನ್‌ವೆಲ್ತ್ ಪದಕ ವಿಜೇತನ ಬಗ್ಗೆ ಅರಿವು ಇಲ್ಲದ್ದನ್ನ ಖಂಡಿಸಿದ್ದರು. ಆದರೆ, ಇದೀಗ ಸ್ವತಃ ನೀರಜ್ ಚೋಪ್ರಾ ಅವರೇ ಗುರುವಿನ ಮನೆಗೆ ಬಂದು ಪದಕ ತೋರಿಸಿ ಗೆಲುವನ್ನು ಸಂಭ್ರಮಿಸಿದ್ದು, ವಿರೋಧ ವ್ಯಕ್ತಪಡಿಸಿದವರಿಗೆ ಪ್ರತ್ಯುತ್ತರ ನೀಡಿದಂತಾಗಿದೆ.