ಕರ್ನಾಟಕ

karnataka

ETV Bharat / state

ಸರ್ಕಾರಿ ಬಸ್​ನಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ: ನಾಲ್ವರು ಮಹಿಳೆಯರ ಬಂಧನ

ಸರ್ಕಾರಿ ಬಸ್​ನಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸಹಿತ 30 ಸಾವಿರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿರುವ ಘಟನೆ ಕಾರವಾರ ತಾಲ್ಲೂಕಿನ ಸದಾಶಿವಗಡದ ಟೋಲ್ ನಾಕಾ ಬಳಿ ಶುಕ್ರವಾರ ನಡೆದಿದೆ.

ಬಂಧಿತ ಮಹಿಳೆಯರು

By

Published : Sep 22, 2019, 1:40 PM IST

ಕಾರವಾರ: ಸರ್ಕಾರಿ ಬಸ್​ನಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸಹಿತ 30 ಸಾವಿರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿರುವ ಘಟನೆ ತಾಲ್ಲೂಕಿನ ಸದಾಶಿವಗಡದ ಟೋಲ್ ನಾಕಾ ಬಳಿ ನಡೆದಿದೆ.

ಬಂಧಿತರನ್ನು ಸುನಿತಾ ಕೃಷ್ಣಾ ಹರಿಕಂತ್ರ, ಗಿರಿಜಾ ರಾಮಚಂದ್ರ ಹರಿಕಂತ್ರ, ಮಂಗಲಾ ನಾರಾಯಣ ಬಾನಾವಳಿಕರ ಮತ್ತು ತುಳಸಿ ಮಾಬಳು ಹರಿಕಂತ್ರ ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ವೇಳೆ ಮಡಗಾಂವದಿಂದ ಕಾರವಾರಕ್ಕೆ ಬರುತ್ತಿದ್ದ ಕದಂಬ ಹೆಸರಿನ ಖಾಸಗಿ ಬಸ್​ನಲ್ಲಿ ನಾಲ್ವರು ಮಹಿಳೆಯರು ಗೋವಾದಿಂದ 55 ಲೀಟರ್ ಮದ್ಯ ಹಾಗೂ ಗೋವಾ ಫೆನ್ನಿ 61 ಲೀಟರ್​ ಸಾಗಾಟ ಮಾಡುತ್ತಿದ್ದರು. ಈ ವೇಳೆ ಟೋಲ್ ನಾಕಾ ಬಳಿ ಪೊಲೀಸರು ಬಸ್ ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜಪ್ತಿ ಮಾಡಿದ ಮದ್ಯ ಹಾಗೂ ಫೆನ್ನಿ ಮೌಲ್ಯ ಅಂದಾಜು ರೂ. 30,050 ಆಗಿದ್ದು, ಸರ್ಕಾರಿ ಬಸ್ ಬಿಡುಗಡೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕಿ ಸುವರ್ಣಾ ಬಿ ನಾಯ್ಕ, ಗಣೇಶ್ ಎಸ್ ನಾಯ್ಕ ಹಾಗೂ ಸಿಬ್ಬಂದಿ ಶಿವಾನಂದ ಕೋರಡ್ಡಿ, ರಮೇಶ ಬಡಿಗೇರ, ರವಿ ನಾಯ್ಕ, ರೇಣುಕಾ ಬಂಟ, ಸಿ. ಪಿ. ರಾಠೋಡ, ಎನ್. ಎನ್. ಖಾನ್ ಮೀರಾಸಾಬ್ ನದಾಫ್ ಇದ್ದರು.

ABOUT THE AUTHOR

...view details