ಕರ್ನಾಟಕ

karnataka

ETV Bharat / state

ರೈಲಿನಲ್ಲಿ ಅಕ್ರಮ ಗೋವಾ ಮದ್ಯ ಸಾಗಣೆ...ವಶಕ್ಕೆ ಪಡೆದ ರೈಲ್ವೆ ಪೊಲೀಸರು - Illegal Goa liquor

ಮುಂಬೈನಿಂದ ತ್ರಿವೇಂಡ್ರಂ ತೆರಳುತ್ತಿದ್ದ ನೇತ್ರಾವತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮಧ್ಯ ಬಾಟಲಿಗಳನ್ನು ಕಾರವಾರ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಗೋವಾ ಮದ್ಯ ಸಾಗಾಟ

By

Published : Sep 28, 2019, 9:55 PM IST

ಕಾರವಾರ:ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18 ಸಾವಿರ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದಿದೆ.

ಮುಂಬೈನಿಂದ ತ್ರಿವೇಂಡ್ರಂ ತೆರಳುತ್ತಿದ್ದ ನೇತ್ರಾವತಿ ಎಕ್ಸ್​​​ಪ್ರೆಸ್ ರೈಲಿನ ಮುಂಭಾಗದ ಜನರಲ್ ಬೋಗಿಯಲ್ಲಿ 4 ಬ್ಯಾಗುಗಳಲ್ಲಿ ಗೋವಾದ 190 ಬಾಟಲ್​ಗಳನ್ನು ಸಾಗಿಸುತ್ತಿದ್ದರು. ಇದೇ ವೇಳೆ, ಕಾರವಾರ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ಆರ್​ಪಿಎಫ್ ಸಿಬ್ಬಂದಿ ದಿಲೀಪ್ ಗುನಗಿ ತಪಾಸಣೆ ನಡೆಸಿದಾಗ ಬಾಟಲ್​ ಪತ್ತೆಯಾಗಿದೆ. ಆದರೆ, ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ. ಮದ್ಯವನ್ನು ವಶಕ್ಕೆ ಪಡೆದಿರುವ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ABOUT THE AUTHOR

...view details