ಕರ್ನಾಟಕ

karnataka

ETV Bharat / state

8 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ - ETV Bharath Kannada news

8 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಚಾಲಕ ಹಾಗೂ ನಿರ್ವಾಹಕ - ಶಿರಸಿಯಿಂದ ಬೆಳಗಾವಿಗೆ ಪ್ರಯಾಣಿಸುವ ವೇಳೆ ಆಭರಣ ಬಿಟ್ಟುಹೋದ ಪ್ರಯಾಣಿಕರು.

Honest KSRTC staff in Sirsi
ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ

By

Published : Dec 30, 2022, 8:22 AM IST

ಶಿರಸಿ(ಉತ್ತರ ಕನ್ನಡ):ಬಸ್ಸಿನಲ್ಲಿ 8 ಲಕ್ಷ ರೂ. ಮೌಲ್ಯದ ಚಿನ್ನಾಭವರಣವನ್ನು ಬಿಟ್ಟು ಬೆಳಗಾವಿಗೆ ತೆರಳಿದ್ದ ಪ್ರಯಾಣಿಕರಿಗೆ ಮರಳಿ ಅವರ ವಸ್ತುಗಳನ್ನು ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಹಾನಗಲ್ ಶಿರಸಿ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್​​​ನಲ್ಲಿ ಇಸಳೂರಿನಿಂದ ಕವಿತಾ ಹಾಗೂ ಅವರ ಪುತ್ರ ಬಸ್ ಹತ್ತಿ ಶಿರಸಿಗೆ ಬಂದಿದ್ದರು. ಬಸ್ ಇಳಿಯುವ ಆತುರದಲ್ಲಿ ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್ ನಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು.

ನಂತರ ಮತ್ತೊಂದು ಬಸ್ ಹತ್ತಿ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಗೆ ಹೋದ ತಕ್ಷಣ ತಮ್ಮ ಬ್ಯಾಗ್ ನಾಪತ್ತೆ ಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಶಿರಸಿ ಡಿಪೋಗೆ ಕರೆಮಾಡಿ ವಿಚಾರಿಸಿದ್ದಾರೆ. ಅಷ್ಟರೋಳಗೆ ಹಾನಗಲ್ ಶಿರಸಿ ಬಸ್​ನ ಚಾಲಕ ವಿನೋದ್ ನಾಯ್ಕ ಹಾಗೂ ನಿರ್ವಾಹಕ ಸೇವಾ ನಾಯ್ಕ ರಾಥೋಡ್ ಬಸ್​ನ್ನು ಡಿಪೋಗೆ ತಂದಾಗ ಅಲ್ಲಿ ಚಿನ್ನಾಭರಣ ಇರುವ ಬ್ಯಾಗ್ ಕಂಡು ಬಂದಿತ್ತು. ಅದನ್ನು ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ನೀಡಿದ್ದರು.

ಚಿನ್ನಾಭರಣ ಕಳೆದುಕೊಂಡಿದ್ದ ಕವಿತಾ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು ವಸ್ತುಗಳನ್ನು ಮರಳಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಶಿರಸಿ ವಿಭಾಗೀಯ ಡಿಸಿ ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪ್ರಯಾಣಿಕ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಹುಬ್ಬಳ್ಳಿಯ ರಿಕ್ಷಾ ಚಾಲಕ

ABOUT THE AUTHOR

...view details