ಕರ್ನಾಟಕ

karnataka

ETV Bharat / state

ಮದುವೆ ಮನೆಯಲ್ಲಿ ಮೇಳದ ಬದಲು ಗುಂಡಿನ ಮೊರೆತ: ಬೆಚ್ಚಿ ಬಿದ್ದ ವಧು ಕುಟುಂಬ

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮದುವೆ ಮನೆಯೊಂದರಲ್ಲಿ ಅಪರಿಚಿತರು ಗುಂಡು ಹಾರಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

gun sounds at  bride house
ಮದುವೆ ಮನೆಯಲ್ಲಿ ಗುಂಡಿನ ಶಬ್ಧ

By

Published : Jan 9, 2021, 1:59 PM IST

Updated : Jan 9, 2021, 3:36 PM IST

ಕಾರವಾರ:ಅಂಕೋಲಾದ ಅವರ್ಸಾ ಗ್ರಾಮದ ಮದುವೆ ಮನೆಯೊಂದರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ.

ವಧುವಿನ ಮನೆ ಮೇಲೆ ಗುಂಡಿನ ದಾಳಿ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಧುವಿನ ಮನೆಯಲ್ಲಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ಇಂದು ವಧು ದಿವ್ಯಾ ಮತ್ತು ಪ್ರಕಾಶ ಅವರ ಮದುವೆ ಏರ್ಪಡಿಸಲಾಗಿತ್ತು. ಗುಂಡಿನ‌ ಸದ್ದು ಕೇಳಿ ವಧುವಿನ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಅಂಕೋಲಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಮೊದಲು ಯಾವುದೋ ಮೊಬೈಲ್ ಸ್ಫೋಟಗೊಂಡಿದೆ ಎಂದುಕೊಂಡು ಮನೆಯವರು ಗಾಬರಿಗೊಂಡಿದ್ದರು. ಆದರೆ, ಮದುಮಗಳು ಯಾರೋ ಗುಂಡು ಹೊಡೆದಿರುವುದಾಗಿ ಕೂಗಿಕೊಂಡಿದ್ದು, ಎಲ್ಲರೂ ಆತಂಕಕ್ಕೊಳಗಾಗಿದ್ದಾರೆ. ಮದುಮಗಳು ಇದ್ದ ಕೋಣೆಯ ಕಿಟಕಿ ಬಳಿ ಗುಂಡು ಬಿದ್ದಿದ್ದು, ಅದೃಷ್ಟವಶಾತ್ ವಧು ಪಾರಾಗಿದ್ದಾರೆ. ತಕ್ಷಣ ಹೊರಗೆ ಹೋಗಿ ನೋಡಿದರೂ ಯಾರ ಸುಳಿವು ಪತ್ತೆಯಾಗಿಲ್ಲ.ಇನ್ನು ಬಲ್ಲ ಪೊಲೀಸ್ ಮೂಲಗಳ ಪ್ರಕಾರ ವಧು ಈ ಹಿಂದೆ ಯಾರನ್ನೋ ಲವ್ ಮಾಡಿದ್ದಳು ಎನ್ನಲಾಗಿದ್ದು, ಆತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗುಂಡಿನ ದಾಳಿ ಹಿನ್ನೆಲೆ ಅವರ್ಸಾದ ಖಾಸಗಿ ಸಭಾ ಭವನದಲ್ಲಿ ಬಿಗಿ ಪೊಲೀಸ್​ ಭದ್ರತೆಯಲ್ಲಿ ಮದುವೆ ನೆರವೇರಿದೆ. ಇನ್ನು ಗುಂಡಿನ ದಾಳಿ ನಡೆಸಿದವರ ಪತ್ತೆಗೆ ಕುಟುಂಬಸ್ಥರು ಆಗ್ರಹಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮದುವೆ ಮನೆಯಲ್ಲಿ ಗುಂಡಿನ ಶಬ್ಧ

ಇದನ್ನೂ ಓದಿ:ಗಯಾದಲ್ಲಿ ಕರ್ನಾಟಕದ 9 ಮಂದಿ ಸೇರಿ 16 ಜನ ಸೈಬರ್ ವಂಚಕರ ಬಂಧನ

Last Updated : Jan 9, 2021, 3:36 PM IST

ABOUT THE AUTHOR

...view details