ಕಾರವಾರ: ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಮೂವರು ತಾಲೂಕು ಪಂಚಾಯಿತಿ ಸದಸ್ಯರ ಪೈಕಿ ಇಬ್ಬರು ಆಯ್ಕೆಯಾಗಿ ಒಬ್ಬ ಸೋಲು ಕಂಡಿದ್ದಾರೆ.
ಗ್ರಾ.ಪಂ ಸ್ಪರ್ಧಿಸಿದ್ದ ತಾ.ಪಂ ಮೂವರು ಸದಸ್ಯರು: ಇಬ್ಬರಿಗೆ ಗೆಲುವು, ಓರ್ವನಿಗೆ ಸೋಲು - Karwar village panchayat elections
ಕಾರವಾರದಲ್ಲಿ ತಾಲೂಕು ಪಂಚಾಯಿತಿ ಅವಧಿ ಮುಗಿಯುತ್ತಿರುವ ಹಿನ್ನೆಲೆ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರ ಪೈಕಿ ಇಬ್ಬರು ಗೆಲುವಿನ ದಡ ಸೇರಿದ್ದಾರೆ.
ಗ್ರಾ.ಪಂ ಸ್ಪರ್ಧಿಸಿದ್ದ ತಾ.ಪಂ ಮೂವರು ಸದಸ್ಯರು
ತಾಲೂಕಿನ ಮುಡಗೇರಿ ಗ್ರಾ.ಪಂನ ಅಂಗಡಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸುರೇಂದ್ರ ಗಾಂವ್ಕರ್ ಗೆಲುವು ಸಾಧಿಸಿದ್ದರೆ, ಅಮದಳ್ಳಿ ಗ್ರಾ.ಪಂನ ಸಾಣೇಮಕ್ಕಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಪುರುಷೋತ್ತಮ ಗೌಡ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಕಿನ್ನರ ಗ್ರಾ.ಪಂನ ಘಾಡಸಾಯಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಪ್ರಶಾಂತ ಗೋವೇಕರ್ ಸೋಲು ಕಂಡಿದ್ದಾರೆ.
ತಾಲೂಕು ಪಂಚಾಯಿತಿ ಅವಧಿ ಮುಗಿಯುತ್ತಿರುವ ಹಿನ್ನೆಲೆ ಮೂವರು ಗ್ರಾ.ಪಂ ಅಖಾಡಕ್ಕೆ ಧುಮುಕಿದ್ದರು. ಅದರಲ್ಲಿ ಇಬ್ಬರಿಗೆ ವಿಜಯಲಕ್ಷ್ಮೀ ಒಲಿದರೆ, ಮತ್ತೊಬ್ಬ ಅಭ್ಯರ್ಥಿ ಪರಾಭವಗೊಂಡಿದ್ದಾರೆ.