ಕರ್ನಾಟಕ

karnataka

ETV Bharat / state

ಚಿಕ್ಕ ವಯಸ್ಸಿನಲ್ಲಿಯೇ ಗ್ರಾಪಂ ಸದಸ್ಯೆಯಾಗಿ ಗೆಲುವಿನ ನಗೆ ಬೀರಿದ ಎಂಜಿನಿಯರಿಂಗ್ ಪದವೀಧರೆ!

ಇವರು ಅತಿ ಕಿರಿಯ ವಯಸ್ಸಿನಲ್ಲಿಯೇ ಗ್ರಾಮ ಪಂಚಾಯತ್‌ಗೆ ಸ್ಪರ್ಧಿಸಿದ್ದು, ಮೊದಲ ಬಾರಿಗೆ ಯಶಸ್ಸು ಕಂಡಿದ್ದಾರೆ. ವೆಲಿಂಡಾ ಎಂಜಿನಿಯರಿಂಗ್‌ ಪದವೀಧರೆಯಾಗಿದ್ದಾರೆ..

karwar
ಎಂಜಿನಿಯರಿಂಗ್ ಪದವೀಧರೆ ವೆಲಿಂಡಾ ಡಿಸೋಜಾ

By

Published : Dec 30, 2020, 1:16 PM IST

ಕಾರವಾರ :ಎಂಜಿನಿಯರ್ ಆಗಿದ್ರೂ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರೂ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಯುವತಿಯೊಬ್ಬರು ಈಗ ಗೆದ್ದು ಬೀಗಿದ್ದಾರೆ.

ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತ್‌ನ ವಾರ್ಡ್‌ವೊಂದರಲ್ಲಿ ಸ್ಪರ್ಧಿಸಿದ್ದ ವೆಲಿಂಡಾ ಡಿಸೋಜಾ ಎಂಬು ಯುವತಿ 12 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.

ಗೆಲುವಿನ ನಗೆ ಬೀರಿದ ಎಂಜಿನಿಯರಿಂಗ್ ಪದವೀಧರೆ..

ಇವರು ಕಾರವಾರದ ನೆವೆಲ್ ಬೇಸ್​ನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವೆಲಿಂಡಾ ಡಿಸೋಜಾ 268 ಮತಗಳನ್ನು ಪಡೆದು 12 ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಓದಿ:'ಕಾರವಾರ'ವನ್ನು 'ಬೆಟರ್​' ಮಾಡ ಹೊರಟಿದೆ ಈ ಮಾದರಿ ತಂಡ!

ಇವರು ಅತಿ ಕಿರಿಯ ವಯಸ್ಸಿನಲ್ಲಿಯೇ ಗ್ರಾಮ ಪಂಚಾಯತ್‌ಗೆ ಸ್ಪರ್ಧಿಸಿದ್ದು, ಮೊದಲ ಬಾರಿಗೆ ಯಶಸ್ಸು ಕಂಡಿದ್ದಾರೆ. ವೆಲಿಂಡಾ ಎಂಜಿನಿಯರಿಂಗ್‌ ಪದವೀಧರೆಯಾಗಿದ್ದಾರೆ.

ABOUT THE AUTHOR

...view details