ಕರ್ನಾಟಕ

karnataka

ETV Bharat / state

ತೋಟ, ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡಿದ ಗಜಪಡೆ: ಉತ್ತರ ಕನ್ನಡ ರೈತರು ಕಂಗಾಲು

ಆನೆಗಳ ಹಿಂಡು ಕಾರವಾರದ ಬಳಿ ರೈತರ ತೋಟ, ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ.

dsd
ಬೆಳೆ ಹಾಳುಗೆಡವಿದ ಗಜಪಡೆ

By

Published : Dec 2, 2020, 2:17 PM IST

ಕಾರವಾರ: ಆನೆಗಳ ಹಿಂಡು ತೋಟ ಹಾಗೂ ಗದ್ದೆಗಳಿಗೆ ದಾಳಿ ಮಾಡಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ನಡೆದಿದೆ.

ಬೆಳೆ ಹಾಳು ಗೆಡವಿದ ಗಜಪಡೆ

ತಾಲೂಕಿನ ಇಂದೂರ ಶಾಖೆಯ ವಡಗಟ್ಟಾ ಗ್ರಾಮದಲ್ಲಿ ಹಾನಗಲ್ ಭಾಗದಿಂದ ಬಂದ ಆನೆಗಳು, ಅಡಿಕೆ ತೋಟ, ಗದ್ದೆಗಳಿಗೆ ನುಗ್ಗಿವೆ. ಇದರಿಂದ ಬಸವರಾಜ ತಗಡಿನಮನಿ ಎಂಬ ರೈತನ ಅಂದಾಜು 500 ರಿಂದ 600 ಬಾಳೆ ಮತ್ತು ಅಡಿಕೆ ಗಿಡಗಳು ನಾಶವಾಗಿವೆ. ಪೀರಪ್ಪ ಲಮಾಣಿ ಎಂಬ ರೈತನ ಎರಡು ಎಕರೆ ಭತ್ತದ ಕಾಳಿನ ಬಣವೆ ಧ್ವಂಸವಾಗಿವೆ.

ಪ್ರತಿ ವರ್ಷ ಮುಂಡಗೋಡ ಭಾಗಕ್ಕೆ ಆಗಮಿಸಿ ಬೆಳೆ ಹಾನಿ ಮಾಡುವ ಆನೆಗಳ‌ ಹಿಂಡು ಈ ಬಾರಿ ಗುಂಜಾವತಿ, ಕಳಕಿಕಾರೆ, ಮೈನಳ್ಳಿ, ಉಗ್ಗಿನಕೇರಿ, ತಮ್ಯಾನಕೊಪ್ಪ, ತೇಗಿನಕೊಪ್ಪ, ಕೋಡಂಬಿ, ಬೆಡಸಗಾಂವ, ಕೂರ್ಲಿ, ಅಟಬೈಲ್, ಅಟ್ಟಣಗಿ, ಹನುಮಾಪುರ ಭಾಗಗಳ ರೈತರ ಬೆಳೆಯನ್ನು ಹಾಳು ಮಾಡಿವೆ.‌ ಕಳೆದ ಮೂರು ದಿನದಿಂದ ಆನೆಗಳ ಹಿಂಡು ಜಮೀನಿಗೆ ನುಗ್ಗುತ್ತಿರುವುದನ್ನ ಅರಿತ ರೈತರು ಆನೆಗಳನ್ನು ಓಡಿಸಲು ಹರಸಾಹಸಪಡುತ್ತಿದ್ದಾರೆ.

ABOUT THE AUTHOR

...view details