ಕರ್ನಾಟಕ

karnataka

ETV Bharat / state

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳ ದೇವಸ್ಥಾನಕ್ಕೆ ಕಸದ ತೊಟ್ಟಿ (ಡಸ್ಟ್ ಬಿನ್) ವಿತರಣೆ - Dust bin distribution to Bhatkal Temple

ಇಂದು ಆಸರಕೇರಿ ಶ್ರೀ ತಿರುಮಲ ವೆಂಕಟರಮಣ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ದೇವಾಲಯಗಳಿಗೆ ಕಸದ ತೊಟ್ಟಿ (ಡಸ್ಟ್ ಬಿನ್)ಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು,. ಉತ್ತರ ಕನ್ನಡ ಜಿಲ್ಲೆಯ 301 ದೇವಾಲಯಗಳಿಗೆ ಕಸದ ತೊಟ್ಟಿಯನ್ನು ವಿತರಿಸಲಾಯಿತು.

Dust bin distribution to Bhatkal Temple by Dharmasthala Rural Development Project
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳ ದೇವಸ್ಥಾನಕ್ಕೆ ಕಸದ ತೊಟ್ಟಿ (ಡಸ್ಟ್ ಬಿನ್) ವಿತರಣೆ

By

Published : Feb 2, 2020, 4:17 PM IST

ಭಟ್ಕಳ:ಪುರಸಭೆ ವತಿಯಿಂದ ನಗರ ಸ್ವಚ್ಛತೆಯನ್ನು ಮಾಡುತ್ತಿದ್ದು, ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಪುರಸಭಾ ಆರೋಗ್ಯಾಧಿಕಾರಿ ಸುಜಯಾ ಸೋಮನ್ ಹೇಳಿದರು.

ಇಂದು ಆಸರಕೇರಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ದೇವಾಲಯಗಳಿಗೆ ಕಸದ ತೊಟ್ಟಿ (ಡಸ್ಟ್ ಬಿನ್)ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಜಯಾ ಸೋಮನ್, ಜನತೆಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಹಾಗೂ ಅವುಗಳನ್ನು ಪ್ರತ್ಯೇಕವಾಗಿಟ್ಟು ಪುರಸಭಾ ವಾಹನಗಳಿಗೆ ನೀಡುವ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಜೊತೆಗೆ ಮನೆಯಲ್ಲಿ ತಾಯಂದಿರು ಚಿಕ್ಕ ಮಕ್ಕಳಿಗೆ ಸ್ವಚ್ಛತೆಯ ಕುರಿತು ತಿಳಿ ಹೇಳಬೇಕಾಗುತ್ತದೆಯೆಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳ ದೇವಸ್ಥಾನಕ್ಕೆ ಕಸದ ತೊಟ್ಟಿ (ಡಸ್ಟ್ ಬಿನ್) ವಿತರಣೆ

ಈಗಾಗಲೇ ಭಟ್ಕಳ ನಗರದಾದ್ಯಂತ 5 ವಾಹನಗಳನ್ನು ಕಸ ಸಂಗ್ರಹಣೆಗೆ ಮೀಸಲಿಡಲಾಗಿದ್ದು, ಕಸವನ್ನು ಎಸೆಯದೇ ಪುರಸಭೆಯ ವಾಹನಕ್ಕೆ ನೀಡಬೇಕು. ನಾವು ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಮ್ಮ ಯುವ ಪೀಳಿಗೆಗೆ ಅದನ್ನು ಕಲಿಸುವುದು ಅಗತ್ಯ ಎಂದರು. ದೇವಾಲಯಗಳಲ್ಲಿ ಸಂಗ್ರಹವಾಗುವ ಕಸಗಳನ್ನು ಪುರಸಭೆ, ಪಂಚಾಯತ್‍ಗಳು ಸಂಗ್ರಹ ಮಾಡಲು ಬದ್ಧ ಎಂದ ಅವರು ಹಸಿ ಮತ್ತು ಒಣ ಕಸಗಳನ್ನು ಬೇರೆ ಬೇರೆ ಮಾಡುವುದರಿಂದ ಪರಿಸರವನ್ನು ಕಾಪಾಡಿದಂತಾಗುತ್ತದೆಯೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಜನಾಧಿಕಾರಿ ಎಂ.ಎಸ್ ಈಶ್ವರ ಅವರು ಮಾತನಾಡಿ, ಯೋಜನೆಯ ವತಿಯಿಂದ ಒಂದು ಸಾವಿರ ದೇವಸ್ಥಾನಗಳಿಗೆ ತಲಾ ಎರಡರಂತೆ ಕಸದ ತೊಟ್ಟಿಯನ್ನು ನೀಡಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ 301 ದೇವಾಲಯಗಳಿಗೆ ಕಸದ ತೊಟ್ಟಿಯನ್ನು ನೀಡಲಾಗುತ್ತಿದೆ. ಭಟ್ಕಳ-ಹೊನ್ನಾವರ ಕಾರ್ಯಕ್ಷೇತ್ರದ 51 ದೇವಾಲಯಗಳಿಗೆ ನೀಡಲಾಗಿದ್ದು, ಇದು ಸದುಪಯೋಗವಾಗಲಿ ಎಂದರು. ಪ್ರತೀ ವರ್ಷ ರಾಜ್ಯದ ಸುಮಾರು 7277 ಶ್ರದ್ಧಾ ಕೇಂದ್ರಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು 2.54 ಲಕ್ಷ ಸ್ವಚ್ಛ ಸೇನಾನಿಗಳು ಸೇರಿ ಮಾಡುತ್ತಿದ್ದಾರೆ ಎಂದರು.

ABOUT THE AUTHOR

...view details