ಭಟ್ಕಳ:ತಾಲ್ಲೂಕಿನ ಆಜಾದ್ ನಗರ ಪಾರಿವಾಳ ಸಾಕಾಣಿಕೆ ಕೇಂದ್ರದಲ್ಲಿನ ದುಬಾರಿ ಬೆಲೆಯ 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಭಟ್ಕಳ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ.
ಆರೋಪಿ ತಮಿಳುನಾಡು ಮೂಲದ ಪನ್ನೀರ್ ಸೇಲ್ವಂ ಎಂದು ಗುರ್ತಿಸಲಾಗಿದೆ. ಈತನಿಂದ ಸುಮಾರು 15 ಲಕ್ಷ ರೂ. ಮೌಲ್ಯದ 18 ಪಾರಿವಾಳಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಕಳೆದ ಅ.5ರ ರಾತ್ರಿ 25 ಪಾರಿವಾಳಗಳನ್ನು ಕಳ್ಳತನ ಮಾಡಲಾಗಿತ್ತು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಇದನ್ನು ಪೊಲೀಸರಿಗೆ ನೀಡಿ ಮಾಲೀಕ ಅಫ್ಜಲ್ ಖಾಸಿಂಜೀ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ. ಕದ್ದ ಪಾರಿವಾಳಗಳ ಪೈಕಿ 7 ಪಾರಿವಾಳಗಳನ್ನು ಈತ ಬೇರೆಡೆ ಮಾರಾಟ ಮಾಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.