ಕಾರವಾರ:ಕೊರೊನಾ ಪರೀಕ್ಷೆ ಕಾನೂನಿನ ಭಯ ತೋರಿಸಿ ಮಾಡುವುದಲ್ಲ, ಆರೋಗ್ಯ ಇಲಾಖೆ ಯಾರನ್ನ ಪರೀಕ್ಷಿಸಲು ನಿರ್ಧರಿಸುತ್ತದೆಯೋ ಅವರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.
ಮಾಸ್ಕ್ ಧರಿಸಲು ನಿರಾಕರಿಸಿದರೆ ಕೊರೊನಾ ತಪಾಸಣೆ: ಡಿಸಿ ಹರೀಶ್ ಕುಮಾರ್
ಉದ್ದೇಶ ಪೂರಕವಾಗಿ ಮಾಸ್ಕ್ ಹಾಕುವುದನ್ನು ನಿರಾಕರಿಸುತ್ತಾರೋ ಅಂಥವರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುವುದು. ನಮ್ಮ ಉದ್ದೇಶ ಒಂದೇ ಮಹಾಮಾರಿಯಿಂದ ಜನರ ಜೀವ ಉಳಿಸುವಂಥದ್ದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಕುಮಟಾದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾರು ಉದ್ದೇಶ ಪೂರಕವಾಗಿ ಮಾಸ್ಕ್ ಹಾಕುವುದನ್ನು ನಿರಾಕರಿಸುತ್ತಾರೋ ಅಂಥವರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುವುದು. ನಮ್ಮ ಉದ್ದೇಶ ಒಂದೇ ಮಹಾಮಾರಿಯಿಂದ ಜನರ ಜೀವ ಉಳಿಸುವಂಥದ್ದಾಗಿದೆ. ಹೀಗಾಗಿ ಕನಿಷ್ಠ ಪಕ್ಷ ಮಾಸ್ಕ್ ಧರಿಸುವುದಕ್ಕೂ ನಿರಾಕರಿಸಿದರೆ ಅಂಥವರ ಕಡ್ಡಾಯ ಕೊರೊನಾ ತಪಾಸಣೆ ನಡೆಯಲಿದೆ ಎಂದರು.
ಕೊರೊನಾ ತಪಾಸಣೆ ಹಾಗೂ ಕ್ವಾರಂಟೈನ್ ವಿಚಾರದಲ್ಲಿ ಸಾಕಷ್ಟು ನಿಯಮ ಸಡಿಲಿಕೆ ಮಾಡಲಾಗಿದೆ. ಸೋಂಕಿತರ ಎರಡನೇ ಹಂತದ ಸಂಪರ್ಕಿತರ ತಪಾಸಣೆ ಮಾತ್ರ ನಡೆದು ನೆಗೆಟಿವ್ ಬಂದರೆ 7 ದಿನಗಳ ಬಳಿಕ ಸಾರ್ವಜನಿಕವಾಗಿ ತಿರುಗಾಡಬಹುದಾಗಿದೆ. ಕೇವಲ ಆರೋಗ್ಯ ಇಲಾಖೆಗೆ ವರದಿ ಮಾಡಿಕೊಂಡರೆ ಸಾಕಾಗುತ್ತದೆ ಎಂದರು.