ಕರ್ನಾಟಕ

karnataka

ETV Bharat / state

ವಿಷ ಬೆರಿಸಿದ ಅನ್ನ ತಿಂದ ಜಾನುವಾರುಗಳು: 5 ಸಾವು, 7 ಗೋವುಗಳು ಅಸ್ವಸ್ಥ - ವಿಷ ಆಹಾರ ಸೇವಿಸಿದ ಹಸುಗಳು

ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಅನ್ನಕ್ಕೆ ವಿಷ ಹಾಕಿ ಇಟ್ಟಿದ್ದನ್ನು ಸಾಕಿದ ಹಸುಗಳು ತಿಂದು ಮೃತಪಟ್ಟಿರುವ ಘಟನೆ ಉತ್ತರ ಕನ್ನಡದ ಕಾರವಾರದಲ್ಲಿ ನಡೆದಿದೆ.

cow-dies-after-eating-poisoned-food
ವಿಷ ಬೆರಿಸಿದ ಅನ್ನ ತಿಂದ ಜಾನುವಾರುಗಳು

By

Published : Oct 28, 2022, 7:39 AM IST

ಕಾರವಾರ(ಉತ್ತರ ಕನ್ನಡ): ಕಾಡುಪ್ರಾಣಿಗಳ ಕಾಟ ತಪ್ಪಿಸಲು ಅನ್ನಕ್ಕೆ ವಿಷ ಬೆರೆಸಿ ಇಟ್ಟಿದ್ದನ್ನು ಜಾನುವಾರುಗಳು ತಿಂದು ಸಾವನ್ನಪ್ಪಿರುವ ಘಟನೆ ಜೋಯಿಡಾ ತಾಲೂಕಿನ ನಾಗೋಡಾದಲ್ಲಿ ನಡೆದಿದೆ. ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳುಗಳ ಸಾವು ಕಂಡಿದ್ದು, ಇನ್ನೂ ಏಳು ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.

ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಅನ್ನಕ್ಕೆ ವಿಷ ಹಾಕಿ ಇಟ್ಟಿದ್ದನ್ನು ಹಸುಗಳು ತಿಂದು ಸಾವನ್ನಪ್ಪಿವೆ.

ಅನಂತ ನರಸಿಂಹ ಭಾಗ್ವತ್ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಡು ಪ್ರಾಣಿಗಳ ಕಾಟ ತಡೆಯಲು ಅನ್ನದ ಜೊತೆ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ. ಗೋವಿನ ಮಾಲೀಕರಾದ ಮಮತಾ ಮಹಾಬಲೇಶ್ವರ ಗಾಳಕರ ಎಂಬುವವರು ಠಾಣೆಯಲ್ಲಿ ದೂರು ನೀಡಿದ್ದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ. ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ :ಕೃಷ್ಣಾ ನದಿಯಲ್ಲಿ ಸಾಹಸ... ಬೋಟ್​​​ಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಕಬ್ಬು ಸಾಗಿಸಿದ ರೈತರು!

ABOUT THE AUTHOR

...view details