ಕರ್ನಾಟಕ

karnataka

ETV Bharat / state

ಹೊನ್ನಾವರದಲ್ಲಿ ತಾಂತ್ರಿಕ ತೊಂದರೆ: ಲಸಿಕೆ ವಿತರಣೆ ವಿಳಂಬ

ಹೊನ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟೇ ಪ್ರಯತ್ನಿಸಿದರು ಕೂಡ ಆ್ಯಪ್ ಓಪನ್ ಆಗದ ಹಿನ್ನೆಲೆ ಲಸಿಕೆ ವಿತರಣೆ ವಿಳಂಬವಾಯಿತು.

ಲಸಿಕೆ ಪಡೆದ ನಂತರ  ಅನುಭವ ಹಂಚಿಕೊಂಡ ಯುವತಿ
ಲಸಿಕೆ ಪಡೆದ ನಂತರ ಅನುಭವ ಹಂಚಿಕೊಂಡ ಯುವತಿ

By

Published : Jan 16, 2021, 3:05 PM IST

ಕಾರವಾರ: ಕೋವಿಡ್ ಆ್ಯಪ್​ನಲ್ಲಿ ತಾಂತ್ರಿಕ ತೊಂದರೆ ಉಂಟಾದ ಹಿನ್ನೆಲೆ ಲಸಿಕೆ ವಿತರಣೆ ವಿಳಂಬವಾದ ಘಟನೆ ಹೊನ್ನಾವರದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಲಸಿಕೆ ಪಡೆದ ನಂತರ ಅನುಭವ ಹಂಚಿಕೊಂಡ ಯುವತಿ

ಹೊನ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟೇ ಪ್ರಯತ್ನಿಸಿದರೂ ಆ್ಯಪ್ ಓಪನ್ ಆಗದ ಹಿನ್ನೆಲೆ ಈ ಬಗ್ಗೆ ದೆಹಲಿಯ ತಾಂತ್ರಿಕ ತಂಡದ ಗಮನಕ್ಕೆ ತರಲಾಯಿತು. ಅವರಿಂದಲೂ ಸರಿಪಡಿಸಲು ಸಾಧ್ಯವಾಗದ ಕಾರಣ ಕೊನೆಗೆ ಮ್ಯಾನುವಲ್ ನೋಂದಣಿ ಮಾಡಿಕೊಂಡು ನೋಂದಾಯಿಸಿಕೊಂಡ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಯಿತು.

ಲಸಿಕೆ ಪಡೆದ ನಂತರ ಕಾರವಾರ ಮೆಡಿಕಲ್ ಕಾಲೇಜಿನ ತಾಂತ್ರಿಕ ಸಿಬ್ಬಂದಿ ದಿವ್ಯಾ ಗುನಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಕೊರೊನಾ ಬಂದಾಗ ಭಯವಿತ್ತು. ಆದರೆ ಇದೀಗ ಲಸಿಕೆ ಬಂದಿದ್ದು, ನಾನು ಪಡೆದುಕೊಂಡಿದ್ದೇನೆ. ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ತೊಂದರೆಯಾಗಿಲ್ಲ, ಎಲ್ಲರೂ ಕೂಡ ಲಸಿಕೆ ಪಡೆದುಕೊಳ್ಳಿ ಎಂದರು.

ABOUT THE AUTHOR

...view details