ಕರ್ನಾಟಕ

karnataka

ಸಚಿವ ಶಿವರಾಮ ಹೆಬ್ಬಾರ್​ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್

By

Published : Sep 5, 2020, 4:12 PM IST

ನಿಮ್ಮೆಲ್ಲರ ಆರ್ಶೀವಾದ, ಹಾರೈಕೆಯಿಂದ ಅತೀ ಶೀಘ್ರ ಗುಣಮುಖವಾಗಿ ಜನರ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ. ಕಳೆದ 2 ದಿನಗಳಿಂದ ನಮ್ಮ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ..

Corona  Positive for Minister  Shivarama Hebbar &  His Wife
ಸಚಿವ ಶಿವರಾಮ ಹೆಬ್ಬಾರ್​ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್

ಶಿರಸಿ :ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಶಿವರಾಮ ಹೆಬ್ಬಾರ್ ತಮ್ಮ ಫೇಸ್‌ಬುಕ್‌‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇಂದು ನಾನು ಹಾಗೂ ನನ್ನ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ಪರೀಕ್ಷೆಗೊಳಗಾಗಿದ್ದು, ವರದಿಯಲ್ಲಿ ಇಬ್ಬರಿಗೂ ಪಾಸಿಟಿವ್​ ಬಂದಿದೆ. ಯಾವುದೇ ಹೆಚ್ಚಿನ ರೋಗಲಕ್ಷಣ ಇಲ್ಲದ ಕಾರಣ, ವೈದ್ಯರ ಸಲಹೆ ಪಡೆದು ಹೋಂ ಕ್ವಾರಂಟೈನ್​ನಲ್ಲಿದ್ದು, ಚಿಕಿತ್ಸೆ ಪಡೆಯಲಿದ್ದೇವೆ.

ಸಚಿವ ಶಿವರಾಮ ಹೆಬ್ಬಾರ್​ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್

ನಿಮ್ಮೆಲ್ಲರ ಆರ್ಶೀವಾದ, ಹಾರೈಕೆಯಿಂದ ಅತೀ ಶೀಘ್ರ ಗುಣಮುಖವಾಗಿ ಜನರ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ. ಕಳೆದ 2 ದಿನಗಳಿಂದ ನಮ್ಮ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ ಕಾರ್ಮಿಕ ಸಚಿವ ಹೆಬ್ಬಾರ್‌.

ABOUT THE AUTHOR

...view details