ಕರ್ನಾಟಕ

karnataka

ETV Bharat / state

ಉ.ಕ ಜಿಲ್ಲೆಯಲ್ಲಿ ಕೊರೋನಾ ತಾಂಡವ...100ಕ್ಕೆ ಸಮೀಪಿಸುತ್ತಿರುವ ಸಾವಿನ ಸಂಖ್ಯೆ

ಕೊರೊನಾ ಆರಂಭದಲ್ಲಿ ಸೋಂಕು ಹಬ್ಬುವಿಕೆಯನ್ನು ಯಶಸ್ವಿಯಾಗಿ ತಡೆದಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಲಾಕ್‌ಡೌನ್ ವೇಳೆ ವಹಿಸಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಜನರು ಮರೆತಂತೆ ಕಾಣುತ್ತಿದ್ದು ಇದು ಸೋಂಕು ಹೆಚ್ಚಿನ ಜನರಿಗೆ ವ್ಯಾಪಿಸಲು ಕಾರಣವಾಗಿದೆ.

corona count rises in uttara kannada district
ಉ.ಕ ಜಿಲ್ಲೆ

By

Published : Sep 14, 2020, 8:45 PM IST

ಕಾರವಾರ:ಕೊರೊನಾ ನಿಯಂತ್ರಣದಲ್ಲಿ ಯಶಸ್ಸು ಕಂಡು ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿದ್ದ ಉತ್ತರಕನ್ನಡ ಜಿಲ್ಲೆ ಇದೀಗ ಅನ್‌ಲಾಕ್ 4.0 ಜಾರಿಯಾದ ಕೆಲವೇ ದಿನಗಳಲ್ಲಿ ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ಏರಿಕೆಯಾಗಿದ್ದು ಸಾವಿನ ಸಂಖ್ಯೆಯೂ ನೂರರ ಗಡಿ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಆರಂಭದಲ್ಲಿ ಸೋಂಕು ಹಬ್ಬುವಿಕೆಯನ್ನು ಯಶಸ್ವಿಯಾಗಿ ತಡೆದಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನ್‌ಲಾಕ್ ಜಾರಿಯಾಗಿದ್ದು ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದೆ. ಆದರೆ ಲಾಕ್‌ಡೌನ್ ವೇಳೆ ವಹಿಸಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಜನರು ಮರೆತಂತೆ ಕಾಣುತ್ತಿದ್ದು ಇದು ಸೋಂಕು ಹೆಚ್ಚಿನ ಜನರಿಗೆ ವ್ಯಾಪಿಸಲು ಕಾರಣವಾಗಿದೆ.

ಉ.ಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಏರಿಕೆ

ಅನ್‌ಲಾಕ್ ಜಾರಿಯಾದ ಒಂದೇ ವಾರದಲ್ಲೇ 1,150 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಪ್ರತಿನಿತ್ಯ ನೂರರಿಂದ ಇನ್ನೂರು ಪ್ರಕರಣಗಳಂತೆ ಇದುವರೆಗೆ ಜಿಲ್ಲೆಯಲ್ಲಿ 7 ಸಾವಿರದಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದಕ್ಕಿಂತ ಆತಂಕಕಾರಿ ಎನ್ನುವಂತೆ ಕೊರೊನಾ ಪೀಡಿತರ ಸಾವಿನ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಇದುವರೆಗೆ 82 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಮಾತನಾಡಿ, ಬಹುತೇಕ ಕೊರೊನಾ ಸಾವಿನ ಪ್ರಕರಣಗಳು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾದವರೇ ಆಗಿದ್ದು ನಾವು ಪತ್ತೆಹಚ್ಚಿದವರು ಸಾವನ್ನಪ್ಪಿರುವುದು ಕಡಿಮೆಯಿದೆ. ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮವಹಿಸುತ್ತಿದ್ದು ಜನರೂ ಸಹ ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details