ಕರ್ನಾಟಕ

karnataka

ETV Bharat / state

ಶಿರಸಿಯಲ್ಲೊಂದು ಮಾದರಿ ಕೆಲಸ : ಬಂಧಿಖಾನೆ ಕೈದಿಗಳಿಗೆ ಸ್ವರ್ಣವಲ್ಲೀ ಶ್ರೀಗಳಿಂದ ಭಗವದ್ಗೀತೆ ಪಠಣ

ಶಿರಸಿ ನಗರದ ಉಪವಿಭಾಗದ ಕಾರಾಗೃಹದಲ್ಲಿರುವ ಕೈದಿಗಳಿಗೆ 7 ದಿನಗಳ ಕಾಲ ಗೀತೆಯ ಬೋಧನೆ ಅಭಿಯಾನವನ್ನ ಸೋಂದಾ ಸ್ವರ್ಣವಲ್ಲೀ ಮಠ ನಡೆಸುತ್ತಿದೆ.

By

Published : Dec 6, 2021, 9:24 PM IST

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ

ಶಿರಸಿ (ಉತ್ತರ ಕನ್ನಡ): ಕಾರಾಗೃಹದಲ್ಲಿ ಆರೋಪಿಗಳಾಗಿ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಶಿರಸಿಯಲ್ಲಿ ಭಗವದ್ಗೀತೆಯ ಬೋಧನೆಯನ್ನು ಮಾಡುವ ಮೂಲಕ ಮನಃ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ.

ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದಿಂದ ನಡೆಸುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ನಗರದ ಉಪವಿಭಾಗದ ಕಾರಾಗೃಹದಲ್ಲಿರುವ ಕೈದಿಗಳಿಗೆ 7 ದಿನಗಳ ಕಾಲ ಗೀತೆಯ ಬೋಧನೆ ನಡೆಯಲಿದ್ದು, ಅಪರಾಧದ ಮನಸ್ಥಿತಿಯಿಂದ ಹೊರತರಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.‌

ಬಂಧಿಖಾನೆ ಕೈದಿಗಳಿಗೆ ಸ್ವರ್ಣವಲ್ಲೀ ಶ್ರೀಗಳಿಂದ ಭಗವದ್ಗೀತೆ ಪಠಣ

ಕಾರ್ಯಕ್ರಮದ ಅಂಗವಾಗಿ ಸೋಮವಾರ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಕೈದಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದ್ರೀಯ, ಮನಸ್ಸು ಹಾಗೂ ಬುದ್ಧಿಯನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಅತಿಯಾದ ಕಾಮ ಅಥವಾ ಆಸೆ ಮತ್ತು ಅತಿಯಾದ ಕ್ರೋಧದಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇವರೆಡೂ ತಪ್ಪು ಮಾಡಲು ಮೂಲ ಕಾರಣ. ಅದನ್ನು ತೆಗೆದು ಹಾಕಿದಲ್ಲಿ ಜೀವನದಲ್ಲಿ ಅಪರಾಧಗಳು ಆಗುವುದಿಲ್ಲ ಎಂದರು.

ಇಂದ್ರೀಯವನ್ನು ಹಿಡಿತದಲ್ಲಿ ಇಡಬೇಕು ಎಂದು ಭಗವಂತ ಹೇಳುತ್ತಾನೆ. ಅದನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಮನಸ್ಸಿನ ಒಳಗಿರುವ ಆಸೆಗಳು ಸಹ ಕಡಿಮೆ ಆಗುತ್ತವೆ. ಇದರಿಂದ ಅಪರಾಧಗಳು ಕಮ್ಮಿ ಆಗುತ್ತವೆ. ಅಲ್ಲದೇ ಇಂದ್ರೀಯ ಪಡುವ ಆಸೆಗಳೆಲ್ಲವನ್ನೂ ಈಡೇರಿಸಿದಲ್ಲಿ ಅಪರಾಧದ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. ಆದ ಕಾರಣ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕ ಸಮಾಜದ ಆರೋಗ್ಯವೂ ಉತ್ತಮವಾಗಿರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಜೈಲು ಸೂಪರಿಂಡೆಂಟ್ ವೈಲೆಟ್ ನೊರೊನ್ಹಾ, ಜೈಲು ಸಿಬ್ಬಂದಿ ಮಂಜುನಾಥ ನಾಯ್ಕ, ವಿದ್ಯಾ ನಾಯ್ಕ ಇದ್ದರು.

ಇದನ್ನೂ ಓದಿ : ಏಷ್ಯಾದ ಅತ್ಯಂತ ಬಲಶಾಲಿ ದೇಶಗಳಲ್ಲಿ ಭಾರತಕ್ಕೆ 4ನೇ ಸ್ಥಾನ.. ಪವರ್ ಇಂಡೆಕ್ಸ್ ವರದಿ

ABOUT THE AUTHOR

...view details