ಕರ್ನಾಟಕ

karnataka

ETV Bharat / state

ರಾಜ್ಯ ಬಿಜೆಪಿಗೆ ಅನಂತ್ ಕುಮಾರ್ ಹೆಗಡೆ ಅಪಥ್ಯವೇ.. ಕೇಂದ್ರ ಮಂತ್ರಿ ಸ್ಥಾನಕ್ಕಾಗಿ ಅಭಿಮಾನಿಗಳ ಒತ್ತಾಯ!! - ಶಿರಸಿ ಸುದ್ದಿ

ಒಂದು ಕಾಲದಲ್ಲಿ ಉಪ ಚುನಾವಣೆ, ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆಸುತ್ತಿದ್ದ ಸಂಸದರು ಈಗ ಪಕ್ಷಕ್ಕೆ ಬೇಡವಾಗಿದ್ದಾರೆ. ಯಾವ ಹುದ್ದೆಯನ್ನೂ ನೀಡದ ಅವರಿಗೆ ಮಂತ್ರಿ ಸ್ಥಾನವನ್ನಾದ್ರೂ ನೀಡಿ ಅವರ ಹಿರಿತನಕ್ಕೆ ಬೆಲೆ ನೀಡಬೇಕು..

Ananth Kumar hegde
ಸಂಸದ ಅನಂತ್​ ಕುಮಾರ್​ ಹೆಗಡೆ

By

Published : Oct 4, 2020, 5:33 PM IST

ಶಿರಸಿ (ಉತ್ತರ ಕನ್ನಡ) :ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್​ ಕುಮಾರ್​ ಹೆಗಡೆ ಅವರನ್ನು ಈಗ ರಾಜ್ಯ ರಾಜಕಾರಣದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ಕಾಲದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ಹೆಗಡೆ ಅವರೀಗ ರಾಜ್ಯ ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.‌

2020ನೇ ವರ್ಷ ಉಳಿದವರಂತೆ ಸಂಸದ ಹೆಗಡೆಗೂ ಒಳ್ಳೆಯದಾದಂತೆ ಕಂಡು ಬರುತ್ತಿಲ್ಲ. ಕಳೆದ ಅವಧಿಯಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿದ್ದ, ಸ್ಟಾರ್ ಪ್ರಚಾರಕರಾಗಿದ್ದ ಅವರಿಗೆ ಈ ಬಾರಿ ಯಾವ ಹುದ್ದೆಯನ್ನೂ ನೀಡಿಲ್ಲ. ಕೇಂದ್ರ ಸಚಿವ ಸ್ಥಾನ ಹೊಂದಿದ್ದ ಅವರನ್ನು, ಈ ಬಾರಿ ಮಂತ್ರಿ ಮಂಡಲದಿಂದ ಕೈಬಿಡಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸತತ 5ನೇ ಬಾರಿ ಗೆಲುವು ಸಾಧಿಸಿದ್ದ ಹೆಗಡೆ, 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.‌

ಇತ್ತೀಚಿಗೆ ಪುನರ್​ರಚನೆಗೊಂಡ ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಅನಂತ್​ಕುಮಾರ್​ ಹೆಗಡೆಗೆ ಯಾವ ಸ್ಥಾನವನ್ನೂ ನೀಡಿಲ್ಲ. ಇದರಿಂದ ಅವರ ಅಭಿಮಾನಿಗಳು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತಿದ್ದು, ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉತ್ತರ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಇತ್ತೀಚಿಗೆ ನಿಧನರಾದ ಸುರೇಶ್​ ಅಂಗಡಿಯವರ ಬದಲಿಗೆ ಇನ್ನೋರ್ವ ರಾಜ್ಯ ಸಂಸದರಿಗೆ ಸಚಿವ ಸ್ಥಾನ ನೀಡಬೇಕಾಗಿದ್ದು, 6 ಬಾರಿ ಸಂಸದರಾಗಿರುವ ಹೆಗಡೆ ಅವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.‌

ಮಂತ್ರಿ ಸ್ಥಾನ ನೀಡಲು ಹೆಗಡೆ ಅಭಿಮಾನಿಗಳ ಒತ್ತಾಯ

ಒಂದು ಕಾಲದಲ್ಲಿ ಉಪ ಚುನಾವಣೆ, ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆಸುತ್ತಿದ್ದ ಸಂಸದರು ಈಗ ಪಕ್ಷಕ್ಕೆ ಬೇಡವಾಗಿದ್ದಾರೆ. ಯಾವ ಹುದ್ದೆಯನ್ನೂ ನೀಡದ ಅವರಿಗೆ ಮಂತ್ರಿ ಸ್ಥಾನವನ್ನಾದ್ರೂ ನೀಡಿ ಅವರ ಹಿರಿತನಕ್ಕೆ ಬೆಲೆ ನೀಡಬೇಕು ಎನ್ನುವುದು ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಬೇಡಿಕೆ.

ABOUT THE AUTHOR

...view details