ಕಾರವಾರ:OLX ಸೈಟ್‌ನಲ್ಲಿ ಬೈಕ್ ಮಾರಾಟಕ್ಕಿಟ್ಟಿರುವ ಮಾಹಿತಿ ಗಮನಿಸಿ ಖರೀದಿಗೆ ಮುಂದಾಗಿದ್ದ ವ್ಯಕ್ತಿಯೋರ್ವರು ಹಣ ಕಳೆದುಕೊಂಡಿರುವ ಘಟನೆ ಕಾರವಾರದ ತೋಡುರಿನಲ್ಲಿ ನಡೆದಿದೆ.
OLX ನಲ್ಲಿ ಬೈಕ್ ಮಾರಾಟ: ಮಾಹಿತಿ ನಂಬಿ ಹಣ ಕಳ್ಕೊಂಡ ಕಾರವಾರದ ವ್ಯಕ್ತಿ - ಓಎಲ್ಎಕ್ಸ್ ನಂಬಿ ಮೋಸ ಹೋದ ವ್ಯಕ್ತಿ
ತೋಡುರಿನ ಸೀಬರ್ಡ್ ಕಾಲೋನಿ ನಿವಾಸಿ ಗಣೇಶ ನಾಡರ್ ಎರಡು ದಿನದ ಹಿಂದೆ OLX ನಲ್ಲಿ ಸ್ಕೂಟಿ ಮಾರಾಟಕ್ಕಿರುವುದನ್ನು ಗಮನಿಸಿದ್ದರು. ಈ ಕುರಿತು ವಿಚಾರಿಸಿ ಮುಂಗಡ ಹಣವನ್ನು ಕಳುಹಿಸಿಕೊಟ್ಟಿದ್ದರು. ಹಣ ತೆಗೆದುಕೊಂಡವರ ಪತ್ತೆ ಇಲ್ಲದೆ ಹಣ ಕೊಟ್ಟ ಗಣೇಶ ನಾಡರ್ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ತೋಡುರಿನ ಸೀಬರ್ಡ್ ಕಾಲೋನಿ ನಿವಾಸಿ ಗಣೇಶ ನಾಡರ್ ಎರಡು ದಿನದ ಹಿಂದೆ OLX ನಲ್ಲಿ ಸ್ಕೂಟಿ ಮಾರಾಟಕ್ಕಿರುವುದನ್ನು ಗಮನಿಸಿದ್ದರು. ಅಲ್ಲದೇ, ಅದರಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿ ವಿಚಾರಿಸಿದ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮಾಂತೋಷ್ ಯಾದವ್ ಎಂದು ಪರಿಚಯಿಸಿಕೊಂಡಿದ್ದನು. ತಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ವರ್ಗಾವಣೆಯಾದ ಕಾರಣ ಸ್ಕೂಟಿಯನ್ನು 17 ಸಾವಿರಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೇ ತಾವು ಸೇನೆಯಲ್ಲಿ ಕೆಲಸ ಮಾಡುತ್ತಿರುವುದರ ಖಚಿತತೆಗಾಗಿ ತಮ್ಮ ಫೋಟೋ, ಐಡಿ ಕಾರ್ಡ್, ಆಧಾರ್ ಮತ್ತು ಪಾನ್ ಕಾರ್ಡ್ ಕೂಡ ಕಳುಹಿಸಿದ್ದಾರೆ. ಇದೆಲ್ಲವನ್ನು ನೋಡಿ ನಂಬಿದ ಗಣೇಶ ತಾವು ವಾಹನ ಖರೀದಿಸುವುದಾಗಿ ಹೇಳಿದ್ದಾರೆ.
ಬಳಿಕ ವಾಹನ ಕಳುಹಿಸಿಕೊಡಲಾಗುತ್ತಿದ್ದು, ಮುಂಗಡವಾಗಿ ಪಾರ್ಸಲ್ ಚಾರ್ಜ್ ಹಾಕುವಂತೆ ಪಾರ್ಸಲ್ ವೆಚ್ಚದ ಪಾವತಿ ಕಳಿಹಿಸಿದ್ದಾರೆ. ಇದನ್ನು ನಂಬಿದ ಗಣೇಶ ಮೊದಲು 1,500 ರೂಪಾಯಿ ಹಾಕಿದ್ದಾರೆ. ಬಳಿಕ ಮತ್ತೆ ಕರೆ ಮಾಡಿ ಹಣ ಕಡಿಮೆ ಇದೆ ಎಂದು 1,000 ರೂ. ಹಾಕಿಸಿಕೊಂಡಿದ್ದಾರೆ. ಆದ್ರೆ, ಮತ್ತೊಮ್ಮೆ ಕರೆ ಮಾಡಿದಾಗ ಅನುಮಾನಗೊಂಡು ಮೊದಲು ಬೈಕ್ ಕಳುಹಿಸಿ ಬಳಿಕ ಹಣ ನೀಡುವುದಾಗಿ ಹೇಳಿದ್ದಾರೆ. ಇಲ್ಲವಾದಲ್ಲಿ ನೀಡಿದ ಹಣವನ್ನು ವಾಪಸ್ ನೀಡುವಂತೆ ತಿಳಿಸಿದ್ದಾರೆ. ಸದ್ಯ ಕರೆ ಮಾಡಿದರೆ ರಿಸೀವ್ ಮಾಡುತ್ತಿಲ್ಲ, ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಹಾಗಾಗಿ ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಗಣೇಶ ತಿಳಿಸಿದ್ದಾರೆ.