ಕಾರವಾರ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಅಮದಳ್ಳಿ ಟೋಲನಾಕಾ ಬಳಿ ನಡೆದಿದೆ.
ಬಸ್ - ಬೈಕ್ ಮುಖಾಮುಖಿ: ಇಬ್ಬರು ಯುವಕರ ಸಾವು! - ಕಾರವಾರ ಅಪಘಾತ ಸುದ್ದಿ
ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕಾರವಾರ ತಾಲ್ಲೂಕಿನ ಅಮದಳ್ಳಿ ಟೋಲನಾಕಾ ಬಳಿ ನಡೆದಿದೆ.
ಬಸ್ - ಬೈಕ್ ಮುಖಾಮುಖಿ: ಇಬ್ಬರು ಯುವಕರ ಸಾವು
ಕಾರವಾರ ಮೂಲದ ಜಗದೀಶ ಗಣೇಶ ಜಸ್ನೂರ್ (23) ನಾಗೇಂದ್ರ (28) ಮೃತರು. ಅಂಕೋಲಾದಿಂದ ಕಾರವಾರ ಕಡೆಗೆ ರಾಯಲ್ ಎನ್ಫೀಲ್ಡ್ ಬೈಕ್ ಮೂಲಕ ವೇಗವಾಗಿ ಬರುತ್ತಿದ್ದಾಗ, ಕಾರವಾರದಿಂದ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕಾರವಾರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.