ಕರ್ನಾಟಕ

karnataka

ETV Bharat / state

ಯಾರ ಬಳಿ ದುಡ್ಡು ಜಾಸ್ತಿ ಇರುತ್ತದೆಯೋ ಅಂತವರು ಆರಿಸಿ ಬರುತ್ತಾರೆ : ಬಸವರಾಜ್ ಹೊರಟ್ಟಿ - ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ

ಜೆಡಿಎಸ್ ಪಕ್ಷದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಹೊರಗೆ ಬಂದ ಮೇಲೆ ಆ ಪಕ್ಷದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಮಳೆಗಾಲದಲ್ಲಿ ಒಂದು ವಾತಾವರಣ ಇರುತ್ತದೆ, ಬೇಸಿಗೆಯಲ್ಲಿ ಒಂದು ವಾತಾವರಣ ಇರುತ್ತದೆ. ಹವಾ ಹೇಗಿರುತ್ತೋ ಹಾಗೆ ಹೊಂದಿಕೊಳ್ಳಬೇಕು ಎಂದರು.

ಯಾರ ಬಳಿ ದುಡ್ಡು ಜಾಸ್ತಿ ಇರುತ್ತದೆಯೋ ಅಂತವರು ಆರಿಸಿ ಬರುತ್ತಾರೆ ಎಂದ ಬಸವರಾಜ್ ಹೊರಟ್ಟಿ
ಯಾರ ಬಳಿ ದುಡ್ಡು ಜಾಸ್ತಿ ಇರುತ್ತದೆಯೋ ಅಂತವರು ಆರಿಸಿ ಬರುತ್ತಾರೆ ಎಂದ ಬಸವರಾಜ್ ಹೊರಟ್ಟಿ

By

Published : May 31, 2022, 7:57 PM IST

ಕಾರವಾರ: ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ವ್ಯಕ್ತಿ ಯಾಕೆ ನಿಲ್ಲುತ್ತಾರೊ ಗೊತ್ತಿಲ್ಲ. ಯಾರ ಬಳಿ ದುಡ್ಡು ಜಾಸ್ತಿ ಇರುತ್ತದೆಯೋ ಅಂತವರು ಆರಿಸಿ ಬರುತ್ತಾರೆ ಎಂದು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಅಂಕೋಲಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 42 ವರ್ಷದಿಂದ ಜನತಾ ಪರಿವಾರದಲ್ಲಿ ಇದ್ದು ನನ್ನದೇಯಾದ ವರ್ಚಸ್ಸಿನ ಮೂಲಕ ಕೆಲಸ ಮಾಡಿದ್ದೇನೆ. ಇದೀಗ ಶಿಕ್ಷಕರ ಒತ್ತಾಯದ ಮಾತು ಕೇಳಿ ಆಕಸ್ಮಿಕವಾಗಿ ಆದ ಬದಲಾವಣೆಯಿಂದ ನಾನು ಬಿಜೆಪಿಗೆ ಬರಬೇಕಾಯಿತು. ಪರಿಸ್ಥಿತಿಗೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳಬೇಕು. ಹಾಗೇ ಬಿಜೆಪಿಗೆ ಬಂದಿದ್ದೇನೆ ಎಂದರು.

ಕಳೆದ ಬಾರಿ ಬಿಜೆಪಿಯೊಂದಿಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಬಾರಿ ಯಾರು ಪ್ರತಿಸ್ಪರ್ಧಿ ಇಲ್ಲ. ಏಳು ಮಂದಿ ಸ್ಪರ್ಧಿಸಿದ್ದರು, ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಹೊಸಬರಾಗಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಪಕ್ಷದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಹೊರಗೆ ಬಂದ ಮೇಲೆ ಆ ಪಕ್ಷದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಮಳೆಗಾಲದಲ್ಲಿ ಒಂದು ವಾತಾವರಣ ಇರುತ್ತದೆ, ಬೇಸಿಗೆಯಲ್ಲಿ ಒಂದು ವಾತಾವರಣ ಇರುತ್ತದೆ. ಹವಾ ಹೇಗಿರುತ್ತೋ ಹಾಗೆ ಹೊಂದಿಕೊಳ್ಳಬೇಕು ಎಂದರು.

ನನಗೆ ಯಾವುದೇ ಆಕಾಂಕ್ಷೆ ಇಲ್ಲ. ನನ್ನ ಸೀನಿಯಾರಿಟಿ, ಯೋಗ್ಯತೆ ನೋಡಿ ಪಕ್ಷ ನನ್ನಿಂದ ಏನಾದರೂ ಉಪಯೋಗ ಮಾಡಿಕೊಂಡ್ರೆ ಮಾಡಿಕೊಳ್ಳಲಿ. ಇಲ್ಲದಿದ್ರೆ ಪ್ರಾಮಾಣಿಕ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಶಾಲಾ ಮಕ್ಕಳ ಪಠ್ಯದಲ್ಲಿ ಪಾಠ ಸೇರ್ಪಡೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ, ಶಿಕ್ಷಣದ ವಿಷಯದಲ್ಲಿ ಯಾವುದೇ ಸರ್ಕಾರ, ಯಾವುದೇ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕುವೆಂಪು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಜೆಡಿಎಸ್‍ ಪ್ರತಿಭಟನೆ

For All Latest Updates

TAGGED:

ABOUT THE AUTHOR

...view details