ಶಿರಸಿ :ಅಡಿಕೆ ಮಾದಕ ವಸ್ತುವಲ್ಲ. ಅದರೊಂದಿಗೆ ಬೆರೆಸಿ ತಿನ್ನುವ ವಸ್ತು ಮಾದಕವಾಗಿದೆ. ಆದ ಕಾರಣ ಅಡಿಕೆಯನ್ನು ಡ್ರಗ್ಸ್ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಡಿಕೆಯ ಕುರಿತು ಗೃಹ ಸಚಿವ ಬೊಮ್ಮಾಯಿ ಅವರೂ ಹೇಳಿಕೆ ನೀಡಿದ್ದಾರೆ. ಅಡಿಕೆಯಲ್ಲಿ ಕೆಲ ಒಳ್ಳೆಯ ಅಂಶಗಳೂ ಇವೆ. ಅದು ಡ್ರಗ್ಸ್ ಅಲ್ಲ ಎಂದರು.