ಕರ್ನಾಟಕ

karnataka

ETV Bharat / state

ಕೇವಲ ನಾಲ್ಕೇ 4 ಗುಂಟೆಯಲ್ಲಿ 265 ಬಗೆಯ ಭತ್ತದ ಬೆಳೆ... ಶಿರಸಿ ರೈತನ ವಿಶಿಷ್ಠ ಸಾಧನೆ - paddy

ಶಿರಸಿ ತಾಲೂಕಿನ ದೇವತೆ ಮನೆ ಗ್ರಾಮದ ರಾಮಕೃಷ್ಣ ಭಟ್ ತಮ್ಮ ನಾಲ್ಕು ಗುಂಟೆ ಜಮೀನಿನಲ್ಲಿ 265 ಬಗೆಯ ಭತ್ತ ಬೆಳೆದು ಗಮನ ಸೆಳೆದಿದ್ದಾರೆ.

A Shirasi farmer grew 265 varieties of paddy
265 ಬಗೆಯ ಭತ್ತ ಬೆಳೆದ ಶಿರಸಿ ರೈತ

By

Published : Sep 14, 2021, 11:23 AM IST

ಶಿರಸಿ: ವಿಭಿನ್ನ ತಳಿಯ ಭತ್ತವನ್ನು ಹಿಂದಿನ ಕಾಲದಲ್ಲಿ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ‌ ದಿನಗಳಲ್ಲಿ ಕೆಲವೇ ಕೆಲ ತಳಿಯನ್ನು ಮಾತ್ರ ಬೆಳೆಯುತ್ತಿದ್ದಾರೆ. ಹಾಗಾಗಿ, ಪಾರಂಪರಿಕ ತಳಿಗಳನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರೈತರೊಬ್ಬರು ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಬರೋಬ್ಬರಿ 265 ತಳಿಯ ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

265 ಬಗೆಯ ಭತ್ತ ಬೆಳೆದ ಶಿರಸಿ ರೈತ

ಶಿರಸಿ ತಾಲೂಕಿನ ದೇವತೆಮನೆ ಗ್ರಾಮದ ರಾಮಕೃಷ್ಣ ಭಟ್ ತಮ್ಮ ನಾಲ್ಕು ಗುಂಟೆ ಜಮೀನಿನಲ್ಲಿ ಭತ್ತದ ತಳಿಗಳ ಪ್ರಯೋಗ ಶಾಲೆಯನ್ನೇ ತೆರೆದಿದ್ದು, ಸುಮಾರು 265 ಬಗೆಯ ಪಾರಂಪರಿಕ ತಳಿಯ ಭತ್ತಗಳನ್ನು ಬೆಳೆಸಿದ್ದಾರೆ.

ಪ್ರತಿ ತಳಿಯ ಸಸಿಗಳಿಗೆ ಪ್ರತ್ಯೇಕ ಸಂಖ್ಯೆ ನೀಡಿ ಅವುಗಳ ಪಕ್ಕ ಅಂಟಿಸಿಡುತ್ತಾರೆ. ಈ ಸಂಖ್ಯೆ ಆಧರಿಸಿ ನೋಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ 200 ಭತ್ತ ತಳಿಗಳ ಮಾಹಿತಿ ಸದ್ಯಕ್ಕೆ ಲಭ್ಯವಿದೆ. 65 ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ವಿದೇಶಿ ತಳಿಯ ಭತ್ತ:

ಗದ್ದೆಯಲ್ಲಿ ಕಳವೆ, ಮಟ್ಟಳಗ, ಹೊನ್ನಕಟ್ಟು, ಜೇನುಗೂಡು, ಗೌಡರ ಭತ್ತ, ದೊಡ್ಡ ಭತ್ತ, ಜಿಗ್ಗ ವರಟಿಗ, ನೀರ ಮುಳುಗ, ಕರಿ ಕಂಟಕ, ಲಿಂಬೆ ಮೊಹರಿ ಸೇರಿದಂತೆ ಹಲವು ಸ್ಥಳೀಯ ತಳಿಯ ಮತ್ತು ನೇಪಾಳ, ಥಾಯ್ಲೆಂಡ್​​ ಭಾಗದಲ್ಲಿ ಬೆಳೆಯುವ ವಿದೇಶಿ ತಳಿಯ ಭತ್ತವೂ ಸಹ ಇವೆ.

ಇದನ್ನೂ ಓದಿ:Watch.. ನಾಲ್ಕು ಎಕರೆ ಪ್ರದೇಶದಲ್ಲಿ ತುಳಸಿ ಗಿಡ ಬೆಳೆದ ಕುಷ್ಟಗಿ ರೈತ

ಭತ್ತವನ್ನು ಬೆಳೆಯುವ ರೈತರು ಹಾಗೂ ಇರುವ ಭತ್ತದ ಗದ್ದೆಗಳನ್ನು ತೆಗೆದು ಕೆಲ ಲಾಭದಾಯಕ ಬೆಳೆಯ ತೋಟಗಳನ್ನು ಮಾಡುವವರ ನಡುವೆ ಲಾಭದಾಯಕ ಅಲ್ಲದೇ ಹೋದರೂ ಪಾರಂಪರಿಕ ತಳಿಗಳನ್ನು ಉಳಿಸಬೇಕು ಎನ್ನುವ ಉದ್ದೇಶದಿಂದ ಭತ್ತ ಬೆಳೆಯುತ್ತಿರುವುದು ಶ್ಲಾಘನೀಯ ಎನ್ನುವುದು ಕೃಷಿ ವಿಜ್ಞಾನ ಕೇಂದ್ರದವರ ಮಾತಾಗಿದೆ.

ಇದೇ ಕಾರಣಕ್ಕಾಗಿ ಇವರಿಗೆ ಈ ಹಿಂದೆ ಕೃಷಿ ಮೇಳದಲ್ಲಿ ಇನ್ನೊವೇಟಿವ್ ಫಾರ್ಮರ್ ಅವಾರ್ಡ್​​ ಸಹ ನೀಡಲಾಗಿದೆ. ಕೃಷಿಯನ್ನು ಕೇವಲ ಲಾಭದ ದೃಷ್ಟಿಯಲ್ಲಿ ನೋಡುವವರ ಮಧ್ಯದಲ್ಲಿ ರಾಮಕೃಷ್ಣ ಭಟ್ ಅವರ ಕಾರ್ಯ ಮಾದರಿಯಾಗಿದೆ.

ABOUT THE AUTHOR

...view details