ಕಾರವಾರ (ಉತ್ತರಕನ್ನಡ): ನಿದ್ದೆಗಣ್ಣಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗ ಮತ್ತು ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ನಡೆದಿದೆ.
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ತಾಯಿ ಮಗ ಸ್ಥಳದಲ್ಲಿಯೇ ಸಾವು
ರಾತ್ರಿ ಯಕ್ಷಗಾನ ನೋಡಿಕೊಂಡು ಕೊಡ್ಲಗದ್ದೆಯಿಂದ ಅಂಗಡಿಬೈಲ್ ಕಡೆ ಬೈಕ್ನಲ್ಲಿ ತೆರಳುತ್ತಿದ್ದಾಗ ನಿದ್ದೆಗಣ್ಣಿನಲ್ಲಿದ್ದ ಯುವಕ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ
ಅಂಗಡಿಬೈಲ್ನ ಹರಿಹರ ರವಿ ಸಿದ್ದಿ (24), ಬೇಬಿ ಸಿದ್ದಿ (50) ಮೃತ ದುರ್ದೈವಿಗಳು. ರಾತ್ರಿ ಯಕ್ಷಗಾನ ನೋಡಿಕೊಂಡು ಕೊಡ್ಲಗದ್ದೆಯಿಂದ ಅಂಗಡಿಬೈಲ್ ಕಡೆ ಬೈಕ್ನಲ್ಲಿ ತೆರಳುತ್ತಿದ್ದಾಗ ನಿದ್ದೆಗಣ್ಣಿನಲ್ಲಿದ್ದ ಯುವಕ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ಪ್ರೇಯಸಿ ಹೆಸರು ಕೈಮೇಲೆ ಬರೆದುಕೊಂಡು ಪ್ರೇಮಿಗಳ ದಿನದಂದೇ ಪ್ರಿಯಕರ ಆತ್ಮಹತ್ಯೆ!