ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ - man committing suicide by hanging himself in bhatkal

ಬೇಣಂದೂರ ಗ್ರಾಮದ ಎಳ್ಬಾರು ಎಂಬಲ್ಲಿ ವ್ಯಕ್ತಿವೋರ್ವ ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

A man committing suicide by hanging himself in Bhatkal
ಭಟ್ಕಳದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ

By

Published : Jan 5, 2020, 7:42 PM IST

ಭಟ್ಕಳ:ತಾಲೂಕಿನ ಬೇಣಂದೂರ ಗ್ರಾಮದ ಎಳ್ಬಾರು ಎಂಬಲ್ಲಿ ವ್ಯಕ್ತಿವೋರ್ವ ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿ ಗಣಪತಿ ನಾರಾಯಣ ನಾಯ್ಕ(36) ಎಂದು ತಿಳಿದು ಬಂದಿದೆ. ಈತ ವಿಪರೀತ ಕುಡಿತದ ಚಟದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಎನ್ನಲಾಗ್ತಿದೆ. ಶನಿವಾರ ತನ್ನ ಮನೆಯ ಪಕ್ಕದಲ್ಲಿರುವ ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ವಿಷಯ ಪೊಲೀಸರ ಗಮನಕ್ಕೆ ಬಾರದೆ ಶವದ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ವಿಷಯ ಪಕ್ಕದ ಗ್ರಾಮದ ಬೀಟ್ ಪೊಲೀಸರ ಗಮನಕ್ಕೆ ಬಂದ ಬಳಿಕ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಈ ಕುರಿತು ಮೃತ ವ್ಯಕ್ತಿಯ ಸಹೋದರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ABOUT THE AUTHOR

...view details