ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ 6 ಮಂದಿ ಗುಣಮುಖ.. ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ - corona update at uk

ಸೌದಿ ಅರೇಬಿಯಾದಿಂದ ವಾಪಸ್ಸಾದ 36 ವರ್ಷದ ಮಹಿಳೆ ಹಾಗೂ ಮಹಾರಾಷ್ಟ್ರದಿಂದ ಮರಳಿ ಬಂದ 24 ವರ್ಷದ ಯುವಕ, 45 ವರ್ಷದ ವ್ಯಕ್ತಿ ಹಾಗೂ 26 ವರ್ಷದ ಯುವತಿಗೆ ಸೋಂಕು ಕಾಣಿಸಿದೆ. ಆದರೆ, ಎಲ್ಲರು ಕ್ವಾರಂಟೈನ್ ಕೇಂದ್ರದಲ್ಲಿದ್ದವರಾಗಿರುವುದರಿಂದ ಆತಂಕ ದೂರಾಗಿದೆ.

6 corona patients discharge uttara kannad
ಉ.ಕನ್ನಡದಲ್ಲಿ ಆರು ಮಂದಿ ಗುಣಮುಖ ಆಸ್ಪತ್ರೆಯಿಂದ ಡಿಸ್ಚಾರ್ಜ್

By

Published : Jun 20, 2020, 8:58 PM IST

ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಆರು ಮಂದಿ ಗುಣಮುಖರಾಗಿ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ನಾಲ್ವರಲ್ಲಿ ಸೋಂಕು ಕಾಣಿಸಿದೆ.

ಕಾರವಾರ ಮೂಲದ 24 ವರ್ಷದ ಮಹಿಳೆ, ಹಳಿಯಾಳ ಮೂಲದ 14 ವರ್ಷದ ಬಾಲಕ ಹಾಗೂ 25 ವರ್ಷದ ಮಹಿಳೆ, ದಾಂಡೇಲಿ ಮೂಲದ 24 ಹಾಗೂ 34 ವರ್ಷದ ಯುವಕರಿಗೆ, ಮತ್ತು ಕುಮಟಾದ 54 ವರ್ಷದ ವ್ಯಕ್ತಿಯಲ್ಲಿ ಗಂಟಲು ದ್ರವದಲ್ಲಿ ನೆಗೆಟಿವ್ ಬಂದಿದ್ದರಿಂದ ಇಂದು ಎಲ್ಲರನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಇದರ ಬೆನ್ನಲ್ಲೇ ಮತ್ತೆ ನಾಲ್ವರಲ್ಲಿ ಪಾಸಿಟಿವ್ ಕಾಣಿಸಿದೆ. ಸೌದಿ ಅರೇಬಿಯಾದಿಂದ ವಾಪಸ್ಸಾದ 36 ವರ್ಷದ ಮಹಿಳೆ ಹಾಗೂ ಮಹಾರಾಷ್ಟ್ರದಿಂದ ಮರಳಿ ಬಂದ 24 ವರ್ಷದ ಯುವಕ, 45 ವರ್ಷದ ವ್ಯಕ್ತಿ ಹಾಗೂ 26 ವರ್ಷದ ಯುವತಿಗೆ ಸೋಂಕು ಕಾಣಿಸಿದೆ. ಆದರೆ, ಎಲ್ಲರು ಕ್ವಾರಂಟೈನ್ ಕೇಂದ್ರದಲ್ಲಿದ್ದವರಾಗಿರುವುದರಿಂದ ಆತಂಕ ದೂರಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 130 ಜನರಲ್ಲಿ ಸೋಂಕು ಪತ್ತೆಯಾಗಿದೆ. 99 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 31 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details