ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 59 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 43 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಉತ್ತರಕನ್ನಡದಲ್ಲಿ 59 ಮಂದಿಗೆ ಸೋಂಕು: 43 ಮಂದಿ ಗುಣಮುಖ - Uttarakannada corona news
ಉತ್ತರಕನ್ನಡ ಜಿಲ್ಲೆಯಲ್ಲಿಂದು 59 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 3068 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 43 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,113ಕ್ಕೆ ಏರಿಕೆಯಾಗಿದೆ.
ಹಳಿಯಾಳದಲ್ಲಿ 18, ಭಟ್ಕಳ 8, ಸಿದ್ದಾಪುರ 8, ಕುಮಟಾ 7, ಶಿರಸಿ 6, ಜೊಯಿಡಾ ಮತ್ತು ಅಂಕೋಲಾ ತಲಾ 4, ಮುಂಡಗೋಡ 2, ಹೊನ್ನಾವರ, ಕಾರವಾರ ತಲಾ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಯಲ್ಲಾಪುರದ 10, ಹಳಿಯಾಳ 8, ಕಾರವಾರ 6, ಭಟ್ಕಳ, ಶಿರಸಿ ತಲಾ 5, ಹೊನ್ನಾವರ 4, ಅಂಕೋಲಾ 3, ಮುಂಡಗೋಡದಲ್ಲಿ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 3068 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 2,113 ಮಂದಿ ಗುಣಮುಖರಾಗಿದ್ದಾರೆ. 927 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ.