ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕಡಿಮೆಯಾಗುತ್ತಿದ್ದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಬುಧವಾರ 526 ಮಂದಿಯಲ್ಲಿ ಸೋಂಕು ಪತ್ತೆಯಾಗಿ, ಇಬ್ಬರು ಸಾವನ್ನಪ್ಪಿದ್ದಾರೆ.
ಈ ಪೈಕಿ ಕಾರವಾರದಲ್ಲಿ 46, ಅಂಕೋಲಾ 11, ಕುಮಟಾ 94, ಹೊನ್ನಾವರ 98, ಭಟ್ಕಳ 29, ಶಿರಸಿ 69, ಸಿದ್ದಾಪುರ 33, ಯಲ್ಲಾಪುರ 41, ಮುಂಡಗೋಡ 36, ಹಳಿಯಾಳ 56 ಹಾಗೂ ಜೊಯಿಡಾದಲ್ಲಿ 13 ಮಂದಿ ಸೇರಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 48,744 ಮಂದಿ ಸೋಂಕಿತರು ಪತ್ತೆಯಾದಂತಾಗಿದ್ದು, 3,117 ಸಕ್ರಿಯ ಪ್ರಕರಣಗಳಿವೆ.