ಭಟ್ಕಳ: ತಾಲೂಕಿನ ತೆರ್ನಮಕ್ಕಿಯ ಸಬಾತಿಯಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸಾವಿರ ನಗದು ಕಳ್ಳತನ ಮಾಡಿಕೊಂಡು ಖದೀಮರು ಪರಾರಿಯಾಗಿದ್ದಾರೆ.
ಸಬಾತಿಯ ವಾಸುದೇವ ಗಣಪಯ್ಯ ಕಾಮತ್ ಎಂಬಾತರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವಾಸುದೇವರವರು ಗೋವಾದಿಂದ ಬಂದಿದ್ದ ತನ್ನ ಮಗನೊಂದಿಗೆ ನವೆಂಬರ್ 1 ರಂದು ಹೊನ್ನಾವರದ ಮಗಳ ಮನೆಗೆ ಹೋಗಿ ಕೆಲ ದಿನಗಳ ಬಳಿಕ ಮರಳಿ ಬಂದಾಗ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಎದುರಿನ ಬಾಗಿಲನ್ನು ಮುರಿದು ಒಳಹೊಕ್ಕಿ ರೂಮಿನಲ್ಲಿದ್ದ ಕಪಾಟನ್ನು ಮುರಿದು ಅದರಲ್ಲಿದ್ದ 278 ಗ್ರಾಂ. ಚಿನ್ನ ಹಾಗೂ ಬೆಳ್ಳಿಯ ಆಭರಣ ಮತ್ತು 13 ಸಾವಿರ ರೂ. ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ವಾಸುದೇವ ಕಾಮತ್ರ ಸಹೋದರ ದೇವರ ಪೊಜೆಗೆಂದು ಮುಂಜಾನೆ ಹೂ ಕೊಯ್ಯಲು ಅಣ್ಣನ ಮನೆಯ ಹತ್ತಿರ ಬಂದಾಗ ಮನೆಯ ಬಾಗಿಲು ಒಡೆದಿರುವುದನ್ನು ಗಮನಿಸಿ ಅಣ್ಣ ವಾಸುದೇವ ಕಾಮತ್ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸದ್ಯ ಮುರುಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.