ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 200 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 136 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕಾರವಾರದಲ್ಲಿ 38, ಅಂಕೋಲಾ 14, ಕುಮಟಾ 29, ಹೊನ್ನಾವರ 27, ಭಟ್ಕಳ 7, ಶಿರಸಿ 33, ಸಿದ್ದಾಪುರ 6, ಯಲ್ಲಾಪುರ 27, ಮುಂಡಗೋಡ 8, ಹಳಿಯಾಳದಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು ಕಾರವಾರದಲ್ಲಿ 4, ಅಂಕೋಲಾ 7, ಕುಮಟಾ 12, ಹೊನ್ನಾವರ 13, ಭಟ್ಕಳ 10, ಶಿರಸಿ 5, ಸಿದ್ದಾಪುರ 12, ಯಲ್ಲಾಪುರ 42, ಹಳಿಯಾಳ 3, ಮುಂಡಗೋಡ 8 ಹಾಗೂ ಜೋಯಿಡಾದಲ್ಲಿ 20 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೂ ಜಿಲ್ಲೆಯಲ್ಲಿ 7,560 ಮಂದಿಗೆ ಸೋಂಕು ದೃಢಪಟ್ಟಿದ್ದು, 5,305 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,165 ಸಕ್ರಿಯ ಪ್ರಕರಣಗಳಿವೆ. ಹೊನ್ನಾವರದಲ್ಲಿ ಇಬ್ಬರು, ಭಟ್ಕಳ, ಯಲ್ಲಾಪುರ, ಮುಂಡಗೋಡದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಅದರ ಸಂಖ್ಯೆ 90ಕ್ಕೇರಿದೆ.