ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು ಗರಿಷ್ಠ 14 ಮಂದಿಯಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಉತ್ತರ ಕನ್ನಡದಲ್ಲಿ ಇಂದು 14 ಮಂದಿಗೆ ಕೊರೊನಾ ದೃಢ... 12 ಮಂದಿ ಗುಣಮುಖ - latest corona news
ಉತ್ತರ ಕನ್ನಡದಲ್ಲಿ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಂದ ಆಗಮಿಸಿದ 11 ಮಂದಿ ಪುರುಷರು ಹಾಗೂ 3 ಮಂದಿ ಮಹಿಳೆಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಉ. ಕನ್ನಡದಲ್ಲಿ 14 ಮಂದಿಗೆ ಕೊರೊನಾ ಸೋಂಕು ಧೃಡ
ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಂದ ಜಿಲ್ಲೆಗೆ ಆಗಮಿಸಿದ 11 ಮಂದಿ ಪುರುಷರು ಹಾಗೂ 3 ಮಂದಿ ಮಹಿಳೆಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಾರವಾರದ ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಗುಣಮುಖರಾಗಿದ್ದಾರೆ. ಇದರಲ್ಲಿ ಕುಮಟಾ 3, ಹೊನ್ನಾವರದ 3, ಹಳಿಯಾಳದ 2, ಭಟ್ಕಳ 2, ಕಾರವಾರ, ಶಿರಸಿಯ ತಲಾ ಒಬ್ಬರ ವರದಿ ನೆಗೆಟಿವ್ ಬಂದಿದ್ದರಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.