ಕರ್ನಾಟಕ

karnataka

ETV Bharat / state

ಉ.ಕನ್ನಡದಲ್ಲಿ 120 ಕೊರೊನಾ ಪ್ರಕರಣ ದೃಢ, 2 ಸಾವಿರ ಗಡಿ ದಾಟಿದ ಸೋಂಕಿತರು

ಉತ್ತರ ಕನ್ನಡದಲ್ಲಿ ಇಂದು 120 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,027 ಕ್ಕೆ ಏರಿದೆ. ಈವರೆಗೂ 1,268 ಮಂದಿ ಚೇತರಿಸಿಕೊಂಡಿದ್ದು, 22 ಮಂದಿ ಮೃತಪಟ್ಟಿದ್ದಾರೆ.

Coronavirus update
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

By

Published : Jul 30, 2020, 7:18 PM IST

ಕಾರವಾರ:ಜಿಲ್ಲೆಯಲ್ಲಿ ಇಂದು 120 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಎರಡು ಸಾವಿರದ (2,027) ಗಡಿ ದಾಟಿದೆ.

ಕಾರವಾರ, ಅಂಕೋಲಾದಲ್ಲಿ ತಲಾ 11, ಕುಮಟಾ 18, ಹೊನ್ನಾವರ 9, ಭಟ್ಕಳ 13, ಮುಂಡಗೋಡ 26, ಹಳಿಯಾಳ 28 ಹಾಗೂ ಜೊಯಿಡಾದಲ್ಲಿ ನಾಲ್ವರಿಗೆ ಕೊರೊನಾ ದೃಢಪಟ್ಟಿದೆ.

ಅಂಕೋಲಾ, ಮುಂಡಗೋಡದಲ್ಲಿ ತಲಾ 9, ಕಾರವಾರ 5, ಕುಮಟಾ, ಶಿರಸಿಯಲ್ಲಿ ತಲಾ 4, ಹೊನ್ನಾವರದಲ್ಲಿ 1, ಸಿದ್ದಾಪುರದಲ್ಲಿ 2, ಹಳಿಯಾಳದಲ್ಲಿ 17 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆಯಾದರು.

ಈವರೆಗೂ ದಾಖಲಾದ 2,027 ಸೋಂಕಿತರ ಪೈಕಿ 1,268 ಮಂದಿ ಚೇತರಿಸಿಕೊಂಡಿದ್ದಾರೆ. 22 ಮಂದಿ ಸಾವನ್ನಪ್ಪಿದ್ದಾರೆ. 663 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 74 ಸೋಂಕಿತರನ್ನು ಹೋಮ್ ಐಸೊಲೇಶನ್​​ನಲ್ಲಿ ಇಡಲಾಗಿದೆ.

ABOUT THE AUTHOR

...view details