ಕರ್ನಾಟಕ

karnataka

ETV Bharat / state

ಬ್ಯಾಂಕ್ ವಿಲೀನ ಪ್ರಕ್ರಿಯೆ ಒಂದು ಆರ್ಥಿಕ ತುರ್ತು ಪರಿಸ್ಥಿತಿ, ರಾತ್ರೋ ರಾತ್ರಿ ತೀರ್ಮಾನ ಬೇಡ: ಮೊಯ್ಲಿ - Bank merger

ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ ನಷ್ಟ 50 ಸಾವಿರ ಕೋಟಿ ರೂ. ಅಲ್ಲ. ಸುಮಾರು 5 ಲಕ್ಷ ಕೋಟಿ. ಐಎಎಸ್ ಅಧಿಕಾರಿಗಳ ನಿಯೋಗ ಬಂದು ಅಧ್ಯಯನ ನಡೆಸಿದರೆ ಪ್ರಯೋಜನ ಇಲ್ಲ. ತಜ್ಞರ ಸಮಿತಿ‌ ಮಾಡಬೇಕು. ಇವತ್ತಿನವರೆಗೆ ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

ವೀರಪ್ಪ ಮೊಯ್ಲಿ

By

Published : Aug 31, 2019, 7:28 PM IST

ಉಡುಪಿ : ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ ನಷ್ಟ 50 ಸಾವಿರ ಕೋಟಿ ರೂ. ಅಲ್ಲ. ಸುಮಾರು 5 ಲಕ್ಷ ಕೋಟಿ. ಐಎಎಸ್ ಅಧಿಕಾರಿಗಳ ನಿಯೋಗ ಬಂದು ಅಧ್ಯಯನ ನಡೆಸಿದರೆ ಪ್ರಯೋಜನ ಇಲ್ಲ. ತಜ್ಞರ ಸಮಿತಿ‌ ಮಾಡಬೇಕು. ಇವತ್ತಿನವರೆಗೆ ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

ಪರಿಹಾರ ಘೋಷಣೆಗೆ ಕಾಯುವುದು ಸರಿಯಲ್ಲ. ಗೃಹ ಸಚಿವರು ರಾಷ್ಟ್ರೀಯ ವಿಪತ್ತು ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಹಾಗಿದ್ರೂ ಪರಿಹಾರ ಘೋಷಣೆ ಮಾಡಲು ವಿಳಂಬ ಯಾಕೆ ಎಂದು ಪ್ರಶ್ನಿಸಿದರು.

ವೀರಪ್ಪ ಮೊಯ್ಲಿ ಸುದ್ದಿಗೋಷ್ಠಿ

ಬ್ಯಾಂಕ್ ವಿಲೀನ ಪ್ರಕ್ರಿಯೆ ಒಂದು ಆರ್ಥಿಕ ತುರ್ತು ಪರಿಸ್ಥಿತಿ :

ಬ್ಯಾಂಕ್ ವಿಲೀನ ಪ್ರಕ್ರಿಯೆ ಒಂದು ಆರ್ಥಿಕ ತುರ್ತು ಪರಿಸ್ಥಿತಿ. ಬ್ಯಾಂಕ್ ವಿಲೀನ ಪ್ರಧಾನಿ‌ ಮೋದಿಯವರ ಆತುರದ ನಿರ್ಧಾರ. ಪ್ರತಿಯೊಂದನ್ನು ರಾತ್ರಿ ನಿರ್ಧಾರ ಮಾಡುತ್ತಾರೆ. ಬೆಳಗ್ಗೆ ಘೋಷಣೆ ಮಾಡ್ತಾರೆ. ಕಾಶ್ಮೀರ ವಿಚಾರದಲ್ಲೂ ಪ್ರಧಾನಿ ಅವಸರದ ನಿರ್ಧಾರ ಮಾಡಿದ್ದಾರೆ. ದ.ಕ ಜಿಲ್ಲೆ ಬ್ಯಾಂಕ್ ಗಳ ತೊಟ್ಟಿಲು. ಅವಿಭಜಿತ ಜಿಲ್ಲೆಗಳು 4 ಬ್ಯಾಂಕ್ ಗಳ ತವರು. ಹಿಂದೆ ವಿಜಯ ಬ್ಯಾಂಕ್ ವಿಲೀನ ಆಯ್ತು. ಈಗ ಕೆನರಾ, ಸಿಂಡಿಕೇಟ್, ಕಾರ್ಪೋರೇಷನ್ ಬ್ಯಾಂಕ್ ಸರದಿ. ಬ್ಯಾಂಕ್ ವಿಲೀನದ ಸಾಧಕ ಬಾಧಕ ಚರ್ಚೆಯನ್ನೇ ಮಾಡಿಲ್ಲ. ಈ ಎಲ್ಲ ಬ್ಯಾಂಕ್ ಗಳಿಗೂ ಒಂದು ಅಸ್ಮಿತೆ ಇದೆ. ಬಡ ಜನರಿಗೆ ಸೇವೆ ಕೊಡುವ ಉದ್ದೇಶದಿಂದ ಆರಂಭವಾದ ಬ್ಯಾಂಕ್​ಗಳಿವು. ಜನರಿಂದ ಬ್ಯಾಂಕ್ ಗಳನ್ನು ದೂರ ಕೊಂಡೊಯ್ಯಲಾಗುತ್ತಿದೆ. ವಿಲೀನ ಮಾಡುವ ಮೂಲಕ ದೊಡ್ಡ ಬ್ಯಾಂಕ್ ಮಾಡ್ತೇವೆ ಅಂತಾರೆ. ಈ ಬ್ಯಾಂಕ್​ಗಳು ಇನ್ನು ಹಳ್ಳಿಗರಿಗೆ ತಲುಪಲ್ಲ. ದೊಡ್ಡ ಉದ್ಯಮಿಗಳಿಗೆ ಸಾಲ ಕೊಡಲು ದೊಡ್ಡ ಬ್ಯಾಂಕ್ ಮಾಡಿದಾರೆ ಅಷ್ಟೆ. ಮುಂದೆ ನಮ್ಮ ಬ್ಯಾಂಕ್ ಗಳನ್ನು ಹೊರದೇಶದ ಬ್ಯಾಂಕ್ ಗಳಿಗೆ ವಿಲೀನ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ವೈಫಲ್ಯ ಜನರಿಗೆ ತಲುಪಿಸಲು ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ಸಕ್ರಿಯ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಮುಂದಾಗಬೇಕು. ಪ್ರಜಾಪ್ರಭುತ್ವ ಹಿತರಕ್ಷಣೆಗೆ ಕಾಂಗ್ರೆಸ್ ನಾಯಕರು ಹೆದರಬಾರದು ಎಂದು ಕರೆ ನೀಡಿದರು.

ABOUT THE AUTHOR

...view details