ಕರ್ನಾಟಕ

karnataka

ETV Bharat / state

ಡ್ರಗ್ಸ್​​ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಉಡುಪಿ ಪೊಲೀಸರಿಂದ ಬಿಸಿ - udupi latest news

ಉಡುಪಿ ಪೊಲೀಸರು ಚೆಕ್ ಪೋಸ್ಟ್, ನಗರ ಪ್ರದೇಶ, ತಾಲೂಕು-ಜಿಲ್ಲಾ ಗಡಿಯಲ್ಲಿ ಹೆಚ್ಚು-ಹೆಚ್ಚು ತಪಾಸಣೆ ಕೈಗೊಂಡಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅಲ್ಲದೆ, ಗಾಂಜಾ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

Udupi police rounds allover district
ಡ್ರಗ್ಸ್​​ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರೇ ಎಚ್ಚರ; ಉಡುಪಿ ಪೊಲೀಸರು

By

Published : Sep 15, 2020, 7:15 AM IST

ಉಡುಪಿ: ಗಾಂಜಾ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಉಡುಪಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ತಮ್ಮ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಚೆಕ್ ಪೋಸ್ಟ್, ನಗರ ಪ್ರದೇಶ, ತಾಲೂಕು-ಜಿಲ್ಲಾ ಗಡಿಯಲ್ಲಿ ಹೆಚ್ಚು-ಹೆಚ್ಚು ತಪಾಸಣೆ ಕೈಗೊಂಡಿದ್ದಾರೆ. ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕೂಡ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಉಡುಪಿ ಪೊಲೀಸರ ಕಾರ್ಯಾಚರಣೆ

ಎಸ್ಪಿ ವಿಷ್ಣುವರ್ಧನ್, ಎಎಸ್ಪಿ ಕುಮಾರ ಚಂದ್ರ ಖುದ್ದಾಗಿ ಫೀಲ್ಡಿಗಿಳಿದು ಕಾರ್ಯಾಚರಿಸುತ್ತಿದ್ದಾರೆ. ಹೆಚ್ಚು ಶಬ್ಧ ಮಾಡುತ್ತಾ ಕರ್ಕಶವಾಗಿ ಓಡಾಡುವ ಬುಲೆಟ್​​ಗಳಿಗೆ ಫೈನ್ ಹಾಕಿದ್ದಾರೆ. ಹೆಡ್​​ ಲೈಟ್​​ನ ಪಕ್ಕದಲ್ಲಿ ಇರುವ (ಸವಾರರಿಗೆ ಇರಿಟೇಷನ್ ಮಾಡುವ) ನೀಲಿ ಬಣ್ಣದ ಎಲ್ಇಡಿ ಲೈಟ್​​ಗಳನ್ನು ಅಳವಡಿಸಿರುವ ಸವಾರರ ಮೇಲೆ ದಂಡ ಬೀಸಿದ್ದಾರೆ.

ಟ್ರಾಫಿಕ್ ಪೊಲೀಸರು ಎರಡು ಗಂಟೆಯಲ್ಲಿ ಸುಮಾರು 70 ಪ್ರಕರಣಗಳನ್ನು ದಾಖಲಿಸಿ 40,000 ರೂ. ಫೈನ್ ವಸೂಲಿ ಮಾಡಿದ್ದಾರೆ. ಟ್ರಾಫಿಕ್ ನಿಯಮ, ಮೋಟಾರು ವಾಹನ ಕಾಯ್ದೆಗಳನ್ನು ಉಲ್ಲಂಘಿಸಿದ ಸುಮಾರು 25 ಪ್ರಕರಣಗಳು ದಾಖಲಾಗಿದ್ದು 15,000 ರೂ. ದಂಡ ವಸೂಲಾಗಿದೆ. ಇನ್ನೆರಡು ದಿನದಲ್ಲಿ ಡ್ರಗ್ ಪೆಡ್ಲರ್ ಪರೇಡ್ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾದಕ ದ್ರವ್ಯ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಜಾಗೃತಿ ಮೂಡಿಸಿ ದಂಡ ಹಾಕುವುದಾಗಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ABOUT THE AUTHOR

...view details