ಕಾರ್ಕಳ:ಪುರಸಭೆ ವ್ಯಾಪ್ತಿಯ ಪೊಲ್ಲಾರ್ ಪೆರ್ವಾಜೆ ಬಂಗ್ಲುಗುಡ್ಡೆ ಹವಾಲ್ದಾರ್ ಬೆಟ್ಟು ಗಾಂಧಿಮೈದಾನ ತೆಳ್ಳಾರು ಹಾಗೂ ಇನ್ನಿತರ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಭೇಟಿ ನೀಡಿ ರಸ್ತೆ ಕಾಮಗಾರಿ ಗುಣಮಟ್ಟವನ್ನು ಸ್ವತಃ ತಾವೇ ರಸ್ತೆಗಿಳಿದು ಪರೀಕ್ಷಿಸಿದ್ದಾರೆ.
ಕಾರ್ಕಳಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ: ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕರಿಗೆ ತರಾಟೆ - ಕಾರ್ಕಳ ಜಿಲ್ಲಾಧಿಕಾರಿ ಭೇಟಿ ಸುದ್ದಿ
ಕಾರ್ಕಳ ಬಂಡೀಮಠ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ರು. 50 ಜನ ಗ್ರಾಹಕರಿಗೆ ಸಾಕಾಗುವಷ್ಟು ಊಟ ಸಿದ್ಧಪಡಿಸಿ 150 ಜನರ ಊಟದ ಲೆಕ್ಕ ನೀಡಿದ ಮೇಲ್ವಿಚಾರಕರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಉಡುಪಿ ಜಿಲ್ಲಾಧಿಕಾರಿ ಜಗದೀಶ್
ಕಾಮಗಾರಿ ಗುಣಮಟ್ಟ ಇಲ್ಲದೆ ಕಳಪೆ ನಡೆಸಿದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದೇ ಸಂದರ್ಭ ಕಾರ್ಕಳ ಬಂಡೀಮಠ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ 50 ಜನ ಗ್ರಾಹಕರಿಗೆ ಸಾಕಾಗುವಷ್ಟು ಊಟ ಸಿದ್ಧಪಡಿಸಿ 150 ಜನರ ಊಟದ ಲೆಕ್ಕ ನೀಡಿದ ಮೇಲ್ವಿಚಾರಕರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಪುರಸಭೆ ಅಧಿಕಾರಿಗಳಿಗೆ ಸಿದ್ಧಪಡಿಸಿದ ಊಟಕ್ಕೆ ಬಿಲ್ಲು ನೀಡಿ ಎಂದು ತಾಕೀತು ಕೂಡಾ ಮಾಡಿದ್ರು.