ಉಡುಪಿ:ಗಣೇಶೋತ್ಸವ ಸಂದರ್ಭದಲ್ಲಿ ವರ್ಷಪೂರ್ತಿ ಹೊಸದೇನಾದ್ರೂ ಮಾಡಬೇಕು ಅನ್ನೋ ಹುಚ್ಚು ಈ ಕಲಾವಿದರದ್ದಾಗಿರುತ್ತೆ. ಈ ಬಾರಿ ಇವರಿಗೆ ಹೊಳೆದದ್ದು ಝಣ ಝಣ ದುಡ್ಡಿನ ಗಣಪ. ಮಣಿಪಾಲದ ಕಲಾವಿದರು ರಚಿಸಿದ ಈ ನೋಟಿನ ಗಣಪ ಕಲಾರಸಿಕರನ್ನು ಮೋಡಿ ಮಾಡ್ತಿದ್ದಾನೆ.
ನೋಟಿನಲ್ಲಿ ಅರಳಿದ ವಿಶಿಷ್ಟ ವಿನಾಯಕ.. ಕಲಾ ರಸಿಕರ ಗಮನ ಸೆಳೆದ ದುಡ್ಡಿನ ಗಣಪ.. - Udupi District Manipal
ಗಣೇಶ ಚತುರ್ಥಿ ಹಿನ್ನೆಲೆ ಉಡುಪಿಯ ಕಲಾವಿದರ ಬಳಗವೊಂದು ವಿವಿಧ ದೇಶಗಳ ನೋಟುಗಳನ್ನು ಬಳಸಿಕೊಂಡು ವಿಶಿಷ್ಟ ಗಣಪತಿಯನ್ನು ರೂಪಿಸಿದ್ದು, ಎಲ್ಲರ ಗಮನ ಸೆಳೆದಿದೆ.
ಮಣಿಪಾಲದ ಸ್ಯಾಂಡ್ ಆರ್ಟ್ ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ, ರವಿ ಹಿರೇಬೆಟ್ಟು 21 ದೇಶದ ಕೃತಕ ನೋಟುಗಳನ್ನು ಬಳಸಿಕೊಂಡು ಸುಮಾರು 12 ಅಡಿ ಎತ್ತರದ ಗಣೇಶ ಮೂರ್ತಿಯನ್ನು ರೂಪಿಸಿದ್ದಾರೆ. ಕಲಾಕೃತಿಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾ, ಚೀನಾ, ಆಫ್ಘಾನಿಸ್ತಾನ, ಅಮೆರಿಕಾ ,ಇಸ್ರೇಲ್,ಭೂತಾನ್, ಯುಎಇ ಮೊದಲಾದ ದೇಶಗಳ 1000 ಕೃತಕ ಪೇಪರ್ ನೋಟುಗಳನ್ನು ಬಳಸಲಾಗಿದೆ.
ಈ ವಿಶಿಷ್ಟ ಗಣಪಣ ರಚನೆಗೆ 200, 500, 100, 50, 10ರ ಮುಖಬೆಲೆಯ ನೋಟುಗಳನ್ನು ಅತಿ ಹೆಚ್ಚು ಬಳಸಲಾಗಿದ್ದು, ನಗರದ ಸಾಯಿರಾಧಾ ಮೋಟಾರ್ಸ್‌ನಲ್ಲಿ 10 ದಿನಗಳ ಸಾರ್ವಜನಿಕ ವೀಕ್ಷಣೆಗೆ ಈ ವಿಶಿಷ್ಟ ಗಣಪನನ್ನ ಇಡಲಾಗಿದೆ.