ಕರ್ನಾಟಕ

karnataka

ETV Bharat / state

ಮಗುವಿಗೆ 'ಕನ್ನಡ'ಎಂದು ನಾಮಕರಣ ಮಾಡಿ ಭಾಷಾಭಿಮಾನ ಮೆರೆದ ದಂಪತಿ! - Udupi latest news

ತಮಿಳಿನಲ್ಲಿ ಇಟ್ಟಿದ್ದ ಹೆಸರುಗಳಿಂದ ಸ್ಫೂರ್ತಿ ಪಡೆದ ಕನ್ನಡ ಪ್ರೇಮಿ ಪ್ರತಾಪ್, ಪತ್ನಿಯ ಒಪ್ಪಿಗೆ ಮೇರೆಗೆ ಕನ್ನಡ ಶೆಟ್ಟಿ ಎಂದು ಮಗಳಿಗೆ ನಾಮಕರಣ ಮಾಡಿದ್ದಾರೆ..

Udupi
Udupi

By

Published : Oct 7, 2020, 6:57 PM IST

ಉಡುಪಿ :ಕನ್ನಾಡಭಿಮಾನ ಮಸುಕಾಗುತ್ತಿರುವ ಈ ಕಾಲದಲ್ಲಿ ಯುವ ಉದ್ಯಮಿಯೊಬ್ಬರು ತಮ್ಮ ಮಗುವಿಗೆ ವಿನೂತನವಾಗಿ ಹೆಸರಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕುಂದಾಪುರ ತಾಲೂಕಿನ ನೆಂಪು ಮೂಲದ ಪ್ರತಾಪ್ ಮತ್ತು ಪ್ರತಿಮಾ ದಂಪತಿಗೆ ಹೆಣ್ಣು ಮಗು ಜನಸಿದೆ. ಮಗುವಿಗೆ ಕನ್ನಡ ಎಂದು ನಾಮಕರಣ ಮಾಡುವ ಮೂಲಕ ಭಾಷಾಭಿಮಾನ ಮೆರೆದಿದ್ದಾರೆ.

ಇಂಟಿರಿಯರ್ ಡಿಸೈನಿಂಗ್ ಕಾಂಟ್ರಾಕ್ಟರ್ ಆಗಿರುವ ಪ್ರತಾಪ್ ಬೆಂಗಳೂರಿನಲ್ಲಿರುವ ಬನ್ನೇರುಘಟ್ಟದಲ್ಲಿ ವಾಸವಾಗಿದ್ದಾರೆ. ವೃತ್ತಿಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ಅವರಿಗೆ ಅಲ್ಲಿನ ತಮಿಳು ವೆಲ್ವಿ, ತಮಿಳರಸನ್ ಮತ್ತು ತಮಿಳ್ ದೊರೈ ಹೆಸರುಗಳು ಆಕರ್ಷಿಸಿದ್ದವು.

ಇದರಿಂದ ಸ್ಫೂರ್ತಿ ಪಡೆದ ಕನ್ನಡ ಪ್ರೇಮಿ ಪ್ರತಾಪ್, ಪತ್ನಿಯ ಒಪ್ಪಿಗೆಯ ಮೇರೆಗೆ ಕನ್ನಡ ಶೆಟ್ಟಿ ಎಂದು ಮಗಳಿಗೆ ನಾಮಕರಣ ಮಾಡಿದ್ದಾರೆ.

ABOUT THE AUTHOR

...view details