ಕರ್ನಾಟಕ

karnataka

ETV Bharat / state

ಉಡುಪಿ: ಮುಂದಿನ ಎರಡು ವಾರ ಬಸ್ ಸಂಚಾರ ಇರಲ್ಲ - Udupi DC G Jagdish

ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡು ವಾರಗಳ ಕಾಲ ಬಸ್ ಸಹಿತ ಸಾರ್ವಜನಿಕ ವಾಹನಗಳನ್ನು ಬಂದ್ ಮಾಡಿದ್ದೇವೆ ಎಂದು ಉಡುಪಿ ಡಿಸಿ ಜಿ. ಜಗದೀಶ್​ ಸ್ಪಷ್ಟಪಡಿಸಿದ್ದಾರೆ.

Udupi: Bus transportation bandh for the next two weeks
ಉಡುಪಿ: ಮುಂದಿನ ಎರಡು ವಾರಗಳ ಕಾಲ ಬಸ್ ಸಂಚಾರ ಬಂದ್

By

Published : Jul 19, 2020, 4:15 PM IST

ಉಡುಪಿ:ಜಿಲ್ಲೆಯಲ್ಲಿ ಎರಡು ವಾರಗಳ ಕಾಲ ಬಸ್ ಸಹಿತ ಸಾರ್ವಜನಿಕ ವಾಹನಗಳ ಸಂಚಾರವನ್ನು ಬಂದ್ ಮಾಡಿದ್ದೇವೆ. ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್​ ತಿಳಿಸಿದ್ದಾರೆ.

ಉಡುಪಿ: ಮುಂದಿನ ಎರಡು ವಾರಗಳ ಕಾಲ ಬಸ್ ಸಂಚಾರ ಬಂದ್

ಎರಡು ತಿಂಗಳುಗಳ ಕಾಲ ಬಸ್ ಸಂಚಾರಕ್ಕೆ ಅನುಮತಿಸಲಾಗಿತ್ತು. ಆದರೆ, ಜನರು ಸಂಜೆ ಹೊತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರಯಾಣ ಮಾಡುತ್ತಿದ್ದರ ಬಗ್ಗೆ ದೂರುಗಳು ಬರುತ್ತಿದ್ದವು. ಈ ಸಂಬಂಧ ಸುಮಾರು 25 ಪ್ರಕರಣಗಳನ್ನು ದಾಖಲಿಸಿದ್ದೇವೆ. ಇದನ್ನೆಲ್ಲ ಮನಗಂಡು ಜನರ ಹಿತದೃಷ್ಟಿಯಿಂದ ಸಾರ್ವಜನಿಕ ಸಂಚಾರ ಬಂದ್ ಮಾಡಿದ್ದೇವೆ. ಇನ್ನೂ ಎರಡು ವಾರಗಳ ಕಾಲ ಬಸ್ ಸಂಚಾರ ಇರುವುದಿಲ್ಲ. ಜನರು ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದರು.

ABOUT THE AUTHOR

...view details