ಉಡುಪಿ : ಸಮುದ್ರದಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಕಾಪು ಬೀಚ್ನಲ್ಲಿ ಇಂದು ಸಂಜೆ ನಡೆದಿದೆ.
ಉಡುಪಿ: ಕಾಪು ಬೀಚ್ನಲ್ಲಿ ಇಬ್ಬರು ಪ್ರವಾಸಿಗರು ಸಾವು - ಕಾಪು ಬೀಚ್ನಲ್ಲಿ ಇಬ್ಬರು ಸಾವು
ಪ್ರವಾಸಕ್ಕೆಂದು ಬಂದ ಇಬ್ಬರು ಯುವಕರು ಕಾಪು ಬೀಚ್ ಬಳಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸಮುದ್ರದಲ್ಲಿ ಮುಳುಗಿ ಇಬ್ಬರು ಸಾವು
ಬೆಂಗಳೂರಿನ ಹೇಸರಘಟ್ಟದ ನಿವಾಸಿಗಳಾದ ರೂಪೇಶ್ ( 21) ಕಾರ್ತಿಕ್ (23 ) ಮೃತಪಟ್ಟ ದುರ್ದೈವಿಗಳು. ಮೃತ ಕಾರ್ತಿಕ್, ರೂಪೇಶ್ ಸಹಿತ ಐವರು ಸ್ನೇಹಿತರು ಕಾಪು ಬೀಚ್ಗೆ ಬಂದಿದ್ದರು. ಇಬ್ಬರು ನೀರಿಗಿಳಿದು ಈಜಾಡುತ್ತಿದ್ದರು, ಈ ವೇಳೆ ಅಲೆಗಳ ಹೊಡೆತಕ್ಕೆ ಸಿಕ್ಕಿ ಸಮುದ್ರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇಬ್ಬರ ಮೃತ ದೇಹಗಳನ್ನು ಸ್ಥಳೀಯ ಮೀನುಗಾರರು ಮೇಲಕ್ಕೆತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.