ಉಡುಪಿ: ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ದಂಡ ಪಾವತಿಸುತ್ತಿದ್ದಾರೆ.
ಟ್ರಾಫಿಕ್ ರೂಲ್ಸ್ ಬ್ರೇಕ್: ಪೊಲೀಸರ ದಂಡಂ ದಶಗುಣಂಗೆ ವಾಹನ ಸವಾರರ ಜೇಬು ಖಾಲಿ
ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರವಾದ ಪ್ರಯುಕ್ತ ಉಡುಪಿಯ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ. ನಗರದ ಎಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ 500 ರಿಂದ 1000 ರೂ. ದಂಡ ವಿಧಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಷುವ ವಾಹನ ಸವಾರರಿಂದ ದಂಡ ವಸೂಲಿ ಮೊತ್ತ ದುಪ್ಪಟ್ಟಾಗಿದೆ. ಲೈಸೆನ್ಸ್ ರಹಿತ ವಾಹನ ಚಲಾಯಿಸಿದರೆ ₹ 5000, ವಯೋಮಿತಿಯಿಲ್ಲದೆ, ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10,000 ರೂ. ದಂಡ. ಹೀಗೆ.. ಸಾವಿರ ಸಾವಿರ ರೂಪಾಯಿ ದಂಡ ಪಾವತಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದೊಡ್ಡ ಹೊರೆಯಾಗಿದೆ. ಸಂಚಾರಿ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ವಾಹನ ಸವಾರರಿಗೆ ಎದುರಾಗಿದೆ. ಈ ಪರಿಷ್ಕೃತ ಮಸೂದೆ ತಿದ್ದುಪಡಿಯಾದ ಹಿನ್ನಲೆಯಲ್ಲಿ ಉಡುಪಿಯಲ್ಲಿ ಪೊಲೀಸರು ವಾಹನ ತಪಾಸಣೆ ಚುರುಕುಗೊಳಿಸಿದ್ದಾರೆ.
ನಗರದ ಎಲ್ಲೆಡೆ ವಾಹನ ತಪಾಸಣೆ ಮಾಡುವ ಮೂಲಕ ಕೆಲವರಿಗೆ 500 ರಿಂದ 1,000 ರೂ. ದಂಡ ವಿಧಿಸಿದ್ದರೇ ಹಣವಿಲ್ಲವೆಂದು ಕೋರಿಕೊಂಡವರಿಗೆ ಎಚ್ಚರಿಕೆಯ ಸಂದೇಶ ಕೊಟ್ಟು ಕಳುಹಿಸಿದ್ದಾರೆ.