ಕರ್ನಾಟಕ

karnataka

ETV Bharat / state

ಕುಟುಂಬಸ್ಥರು, ತಾಲೂಕು ಆಡಳಿತವೇ ಹಿಂಜರಿದಿತ್ತು.. ಆಪದ್ಬಾಂಧವ ಆಸಿಫ್ ಬಾವಿಯೊಳಗಿಂದ ಕೋವಿಡ್ ಶವ ತೆಗೆದರು.. - ಮಾನವೀಯತೆ ಮೆರೆದ ಆಪತ್ಭಾಂಧವ

ತಾಲೂಕು ಆಡಳಿತವೂ ಹಿಂದೆ ಮುಂದೆ ನೋಡ್ತಾ ಶವ ತೆಗೆಯೋದು ಹೇಗೆ ಎಂಬ ಚಿಂತೆಯಲ್ಲಿದ್ದಾಗಲೇ ಆಪದ್ಬಾಂಧವರಾಗಿ ಬಂದ ಆಸಿಫ್‌, ಬಾವಿಯೊಳಗೆ ಇಳಿದು ಶವ ಮೇಲಕ್ಕೆತ್ತಿದ್ದಾರೆ..

ಆಪತ್ಭಾಂಧವ
ಆಪತ್ಭಾಂಧವ

By

Published : Oct 7, 2020, 8:12 PM IST

ಉಡುಪಿ :ಕಾರ್ಕಳದಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬಾವಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವವನ್ನು ಮೇಲಕ್ಕೆತ್ತಲು ಕುಟುಂಬ ಹಾಗೂ ಸಾರ್ವಜನಿಕರು ಹಿಂಜರಿಯುತ್ತಿದ್ದ ವೇಳೆ ಆಸಿಫ್ ಎಂಬಾತ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಾರ್ಕಳದ 45 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿತ್ತು. ಇದನ್ನು ಸಹಿಸಲಾಗದ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ವಿಷಯ ತಿಳಿದ ಕುಟುಂಬಸ್ಥರು, ಸ್ಥಳೀಯರು ಕೊರೊನಾ ಹರಡಬಹುದು ಎಂಬ ಭಯದಿಂದ ಶವವನ್ನು ದಡಕ್ಕೆತ್ತಲು ಹಿಂಜರಿದಿದ್ದರು.

ಶವ ಮೇಲಕ್ಕೆತ್ತಿ ಮಾನವೀಯತೆ ಮೆರೆದ ಆಪತ್ಭಾಂಧವ

ಈ ವೇಳೆ ತಹಶೀಲ್ದಾರರು ನೇರವಾಗಿ ಆಸಿಫ್ ಎಂಬುವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂಧಿಸಿದ ಆಸಿಫ್ ಕಾರ್ಕಳಕ್ಕೆ ತೆರಳಿ ವ್ಯಕ್ತಿಯ ಶವವನ್ನು ದಡಕ್ಕೆತ್ತಿ ಮಾನವೀಯತೆ ಮೆರೆದಿದ್ದಾರೆ. ತಾಲೂಕು ಆಡಳಿತವೂ ಹಿಂದೆ ಮುಂದೆ ನೋಡ್ತಾ ಶವ ತೆಗೆಯೋದು ಹೇಗೆ ಎಂಬ ಚಿಂತೆಯಲ್ಲಿದ್ದಾಗಲೇ ಆಪದ್ಬಾಂಧವರಾಗಿ ಬಂದ ಆಸಿಫ್‌, ಬಾವಿಯೊಳಗೆ ಇಳಿದು ಶವ ಮೇಲಕ್ಕೆತ್ತಿದ್ದಾರೆ.

ABOUT THE AUTHOR

...view details