ಕರ್ನಾಟಕ

karnataka

ETV Bharat / state

ಇಲ್ಲಿನ ಜಾತ್ರೆಯಲ್ಲಿ ಪೊಲೀಸರಿಗೆ ಸಿಗುತ್ತೆ ಅಪರೂಪದ ಗೌರವ!

ವರ್ಷವಿಡೀ ಕಾನೂನು ಪರಿಪಾಲನೆ, ನಾಗರಿಕರ ರಕ್ಷಣೆಯಲ್ಲಿ ತೊಡಗಿರುವ ಆರಕ್ಷಕರಿಗೆ ಬಿಡುವು ಸಿಗುವುದು ಬಲು ಅಪರೂಪ. ಅದ್ರಲ್ಲೂ ಚುನಾವಣೆ ಸಮಯದಲ್ಲಂತೂ ಬಿಡುವಿಲ್ಲದ ಕೆಲಸವಿರುತ್ತದೆ. ಆದ್ರೆ ಇಲ್ಲೊಂದು ಠಾಣೆಯ ಪೊಲೀಸರಿಗೆ ಮಾತ್ರ ಜಾತ್ರೆಯ ಸಮಯದಲ್ಲಿ ರಾಜ ಮಾರ್ಯಾದೆ ಸಿಗುತ್ತೆ. ಅರೇ ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ...

ಜಾತ್ರೆ

By

Published : Apr 27, 2019, 11:49 PM IST

ಉಡುಪಿ:ವರ್ಷವಿಡೀ ಕಾನೂನು ಪರಿಪಾಲನೆ, ನಾಗರಿಕರ ರಕ್ಷಣೆಯಲ್ಲಿ ತೊಡಗಿರುವ ಆರಕ್ಷಕರಿಗೆ ಬಿಡುವು ಸಿಗುವುದು ಬಲು ಅಪರೂಪ. ಅದ್ರಲ್ಲೂ ಚುನಾವಣೆ ಸಮಯದಲ್ಲಂತೂ ಬಿಡುವಿಲ್ಲದ ಕೆಲಸವಿರುತ್ತದೆ. ಆದ್ರೆ ಇಲ್ಲೊಂದು ಠಾಣೆಯ ಪೊಲೀಸರಿಗೆ ಮಾತ್ರ ಜಾತ್ರೆಯ ಸಮಯದಲ್ಲಿ ರಾಜ ಮಾರ್ಯಾದೆ ಸಿಗುತ್ತೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯುವ ಜಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತದೆ. ಅಜಪುರವೆಂದು ಪ್ರಖ್ಯಾತವಾಗಿದ್ದ ಊರು ಕಾಲಕ್ರಮೇಣ ಶ್ರೀ ಮಹತೋಭಾರ ಮಹಾಲಿಂಗೇಶ್ವರನ ಕೃಪೆಯಿಂದ ಬ್ರಹ್ಮಾವರ ಎಂದು ಕರೆಯಲ್ಪಡುತ್ತದೆ. ಇಲ್ಲಿ ಪ್ರತಿ ವರ್ಷವೂ ಏಪ್ರಿಲ್​ನಲ್ಲಿ ನಡೆಯುವ ಮಹಾಲಿಂಗೇಶ್ವರನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇನ್ನು ವರ್ಷದ ಜಾತ್ರೆ ವೇಳೆ ಅಪರೂಪದ ಸಂಪ್ರದಾಯ ನಡೆಯುತ್ತೆ. ಆ ಸಂಪ್ರದಾಯ ಅದೇ ಗತ್ತು ಗೈರತ್ತಿನಲ್ಲಿ ಇಂದಿಗೂ ಕೂಡ ನಡೆಯುತ್ತಿದೆ.

ಬ್ರಹ್ಮಾವರ ಜಾತ್ರೆ

ರಥೋತ್ಸವ ಆರಂಭವಾಗುವ ಅರ್ಧ ಗಂಟೆ ಮೊದಲು ಆಡಳಿತ ಮಂಡಳಿ, ಅರ್ಚಕ ವರ್ಗ ಮತ್ತು ಸ್ಥಳೀಯ ಮುಖಂಡರು ದೇವಾಲಯದಿಂದ ಚಂಡೆ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬ್ರಹ್ಮಾವರ ಆರಕ್ಷಕ ಠಾಣೆಗೆ ತೆರಳಿ, ಅಧಿಕಾರಿಗಳನ್ನು ಆದರ ಪೂರ್ವಕವಾಗಿ ಆಮಂತ್ರಿಸಿ, ರಥೋತ್ಸವ ಕಾರ್ಯಕ್ರಮವನ್ನು ಸಾರಾಗವಾಗಿ ನೆರವೇರಿಸಿಕೊಡುವಂತೆ ವಿನಂತಿಸುತ್ತಾರೆ. ನಂತರ ಅಧಿಕಾರಿಗಳನ್ನು ಮೆರವಣಿಗೆ ಮೂಲಕ ದೇವಾಲಯದ ಬಳಿ ಕರೆದುಕೊಂಡು ಬರಲಾಗುತ್ತೆ. ಸಾವಿರಾರು ಜನ ಭಕ್ತರ ಉಪಸ್ಥಿತಿಯಲ್ಲಿ ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ರಾಜ ಮರ್ಯಾದೆ ನೀಡಲಾಗುತ್ತದೆ. ಹೀಗೆ ಪೊಲೀಸರಿಗೆ ನೀಡುವ ಮರ್ಯಾದೆಯನ್ನು ನಾವು ಬೇರೆಲ್ಲೂ ಕಾಣಲಾಗುವುದಿಲ್ಲ.

ಈ ಬಾರಿಯೂ ಬ್ರಹ್ಮಾವರ ಪೋಲಿಸ್ ಠಾಣೆಯ ಉಪ ನಿರೀಕ್ಷಕ ರಾಘವೇಂದ್ರ ಹಾಗೂ ಸಿಬ್ಬಂದಿ ವರ್ಗದವರು ಪುರಾತನವಾದ ಈ ಆಚರಣೆಯಲ್ಲಿ ಪಾಲ್ಗೊಂಡು, ಹಿಂದಿನಿಂದಲೂ ನಡೆದುಕೊಂಡು ಬಂದ ಈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಇನ್ನು ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯ ಅಧಿಕಾರಿ ವರ್ಗಕ್ಕೆ ಧಾರ್ಮಿಕ ಆಚರಣೆಯಲ್ಲಿ ಈ ರೀತಿಯ ಮಹತ್ವ ನೀಡುತ್ತಿರುವುದು ತುಂಬಾ ವಿಶೇಷ.

ABOUT THE AUTHOR

...view details