ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ವ್ಯಾಪ್ತಿಯ ಸ್ಫೂರ್ತಿ ಸಾಮಾಜಿಕ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೇಶವ ಕೋಟೇಶ್ವರ ಪೋಕ್ಸೋ ಕಾಯ್ದೆಯಡಿ ಅರೆಸ್ಟ್ - posco
4 ದಿನಗಳ ಹಿಂದೆ ನಾಪತ್ತೆಯಾಗಿ ಸದ್ಯ ಪೊಲೀಸರಿಗೆ ಸಿಕ್ಕಿರುವ ಸ್ಫೂರ್ತಿ ಸಂಸ್ಥೆಯ ಹುಡುಗಿಯೊಬ್ಬಳನ್ನು ತನಿಖೆ ನಡೆಸಿದ್ದು, ಆಕೆ ನೀಡಿದ ಮಾಹಿತಿ ಹಿನ್ನೆಲೆ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಫೋಸ್ಕೊ ಕಾಯಿದೆ
ಇದೇ ಮಾರ್ಚ್ 11ರಂದು ಸ್ಫೂರ್ತಿ ಸಂಸ್ಥೆಯ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಳು. ಬಳಿಕ ಆಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಳಲಿದ್ದ ಆಕೆಯನ್ನು ಕಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಅಲ್ಲಿ ವಿಚಾರಿಸಿದಾಗ ಈಕೆ ನೀಡಿದ ಮಾಹಿತಿ ಅನ್ವಯ ಸಂಸ್ಥೆಯ 6 ಮಂದಿ ಹುಡುಗಿಯರನ್ನು ಮಹಿಳಾ ಪೊಲೀಸರು ಕರೆದುಕೊಂಡು ಹೋಗಿ ಅವರನ್ನು ತನಿಖೆಗೊಳಪಡಿಸಿದ್ದಾರೆ.
ಸದ್ಯ ಹುಡುಗಿಯರು ನೀಡಿದ ಮಾಹಿತಿ ಪ್ರಕಾರ ಕೇಶವ ಕೋಟೇಶ್ವರ ಹಾಗೂ ಹನುಮಂತ ಎಂಬವನನ್ನು ವಿಚಾರಣೆ ನಡೆಸಿ, ಪೋಕ್ಸೋ ಕಾಯ್ದಯಡಿ ಕೇಶವ್ ಕೋಟೇಶ್ವರನನ್ನು ಬಂಧಿಸಲಾಗಿದೆ.