ಉಡುಪಿ:ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಭಾರಿ ಗಾತ್ರದ ಅಪರೂಪದ ಮೀನು ಪತ್ತೆಯಾಗಿದೆ. ಉಡುಪಿಯ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟಿಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ನ ಬಲೆಗೆ ಈ ಮೀನು ಬಿದ್ದಿದೆ.
ಮಲ್ಪೆ ಬಂದರಿನಲ್ಲಿ ಪತ್ತೆಯಾದ ಅಪರೂಪದ 'ನೆಮ್ಮೀನ್'ಗೆ ಕೇರಳಿಗರಿಂದ ಬೇಡಿಕೆ - Malpe beach News
ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ನೆಮ್ಮೀನ್ ಎಂಬ ಅಪರೂಪದ ಮೀನು ಪತ್ತೆಯಾಗಿದ್ದು, ಕೇರಳ ಮೂಲದವರು ಇದನ್ನು ಕೆ.ಜಿಗೆ ರೂ. 50ರಂತೆ ಖರೀದಿ ಮಾಡಿದ್ದಾರೆ.
ನೆಮ್ಮೀನ್
ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದ್ದು, ಹೆಲಿಕಾಪ್ಟರ್ ಫಿಶ್ ಎಂದೂ ಸಹ ಕರೆಯಲಾಗುತ್ತದೆ. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ರುಚಿ ಇಷ್ಟವಾಗುವುದಿಲ್ಲ. ಹೀಗಾಗಿ ಈ ಮೀನನ್ನು ಕೇರಳ ಮೂಲದವರು ಕೆ.ಜಿಗೆ ರೂ. 50ರಂತೆ ಖರೀದಿ ಮಾಡಿದ್ದಾರೆ.
ಈ ಮೀನಿನ ಬೆನ್ನಿನ ಮೇಲೆ ಅಗಲಗಲ ರೆಕ್ಕೆಯಿದ್ದು, ಬರೋಬ್ಬರಿ 84 ಕೆ.ಜಿ ತೂಕ ಇರುತ್ತದೆ.
Last Updated : Oct 5, 2021, 9:08 AM IST