ಉಡುಪಿ :ಇಲ್ಲಿನಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ನದಿಯಲ್ಲಿ ವೈದ್ಯಕೀಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಪತ್ತೆಯಾಗಿದೆ. ಇದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.
ಕೊರೊನಾ ಸೋಂಕಿತರನ್ನು ಚಿಕಿತ್ಸೆಗೊಳಪಡಿಸುವಾಗ ಈ ವಿಶೇಷ ಕಿಟ್ ಧರಿಸಲಾಗುತ್ತದೆ. ಉಪಯೋಗಿಸಿದ ಬಳಿಕ ಕಿಟ್‌ನ ಅತ್ಯಂತ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್‌ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ ಹರಡುವ ಸಾಧ್ಯತೆಯಿದೆ. ಗ್ರಾಮಸ್ಥರು ಈ ಘಟನೆಯಿಂದ ಆತಂಕಕ್ಕೊಳಗಾಗಿದ್ದಾರೆ.