ಕರ್ನಾಟಕ

karnataka

ETV Bharat / state

ಕುಂದಾಪುರದಲ್ಲಿ ಮಾನಸಿಕ ಅಸ್ವಸ್ಥನಿಂದ ದೇಶ ವಿರೋಧಿ ಘೋಷಣೆ

ಕುಂದಾಪುರ ತಾಲೂಕು ಪಂಚಾಯತ್ ಮುಂಭಾಗ ಮಾನಸಿಕ ಅಸ್ವಸ್ಥ ದೇಶ ವಿರೋಧಿ ಘೋಷಣೆ ಕೂಗಿರುವ ಘಟನೆ ನಡೆದಿದೆ.

Man shouted anti national slogan in kundapu
ದೇಶ ವಿರೋಧಿ ಘೋಷಣೆ

By

Published : Mar 2, 2020, 2:17 PM IST

ಉಡುಪಿ: ಕುಂದಾಪುರ ತಾಲೂಕು ಪಂಚಾಯತ್ ಮುಂಭಾಗ ದೇಶ ವಿರೋಧಿ ಘೋಷಣೆ ಕೂಗಿರುವ ಘಟನೆ ಇಂದು ನಡೆದಿದೆ. ದೇಶವಿರೋಧಿ ಘೋಷಣೆ ಕೂಗಿದಾತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.

ಕುಂದಾಪುರ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ (43) ಘೋಷಣೆ ಕೂಗಿದಾತ ಎಂದು ಗುರುತಿಸಲಾಗಿದೆ. ಈ ಹಿಂದೆ ಕುಂದಾಪುರ ವಿಕೆಆರ್ ಕಾಲೇಜಿನಲ್ಲಿ ಹಿಂದಿ ಶಿಕ್ಷಕನಾಗಿದ್ದ ಈತನಿಗೆ ವಿವಾಹವಾಗಿದ್ದು, ಒಂದು ಮಗುವಿದೆ ಎಂದು ತಿಳಿದು ಬಂದಿದೆ.

ಕುಂದಾಪುರದಲ್ಲಿ ದೇಶ ವಿರೋಧಿ ಘೋಷಣೆ

ಹೆಂಡತಿ ಮತ್ತು‌ ಮಗು ಸದ್ಯ ತಾಯಿ ಮನೆಯಲ್ಲಿದ್ದಾರೆ. ಈತ ದಿನ ಟಿವಿ ನೋಡುವ ಗೀಳು ಬೆಳೆಸಿಕೊಂಡಿದ್ದ. ಟಿವಿಯಲ್ಲಿ ಬರುತ್ತಿದ್ದ ದೇಶದ್ರೋಹಿ ಹೇಳಿಕೆಯಿಂದ ಪ್ರೇರಣೆ ಪಡೆದುಕೊಂಡು ಈ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.

ಬೆಳಗ್ಗೆ ಕುಂದಾಪುರ ಮಾತಾ ಹಾಸ್ಪಿಟಲ್​ಗೆ ಮಾನಸಿಕ ಚಿಕಿತ್ಸೆ ಕರೆತಂದಾಗ ತಪ್ಪಿಸಿಕೊಂಡಿದ್ದು, ಅಲ್ಲಿಂದ ತಾಲೂಕು ಪಂಚಾಯತ್ ಕಚೇರಿ ಎದುರು ಬಂದು ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details